ಎರಡನೇ ಟೆಸ್ಟ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 559ಕ್ಕೆ 9 ಡಿಕ್ಲೇರ್

ಬ್ಯಾಟ್ಸ್ ಮನ್ ಗಳ ರನ್ ವೇಗಕ್ಕೆ ಬ್ರೇಕ್ ಹಾಕಿದರೂ ಪ್ರವಾಸಿ ನ್ಯೂಜಿಲೆಂಡ್ ತಂಡದ ಮುಂದೆ ಕಠಿಣ ಸವಾಲು ನಿಂತಿದೆ. ಆತಿಥೇಯ ಕಾಂಗರೂ ಪಡೆ ತನ್ನ ಮೊದಲ ...
ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಬ್ಯಾಟ್ಸ್ ಮನ್ ಗಳ ರನ್ ವೇಗಕ್ಕೆ ಬ್ರೇಕ್ ಹಾಕಿದರೂ ಪ್ರವಾಸಿ ನ್ಯೂಜಿಲೆಂಡ್ ತಂಡದ ಮುಂದೆ ಕಠಿಣ ಸವಾಲು ನಿಂತಿದೆ. ಆತಿಥೇಯ ಕಾಂಗರೂ ಪಡೆ ತನ್ನ ಮೊದಲ ಇನಿಂಗ್ಸ್‍ನಲ್ಲಿ ಬೃಹತ್ ಮೊತ್ತ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿದೆ.

ವೆಸ್ಟ್ರನ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿ 133 ಓವರ್‍ಗಳಲ್ಲಿ 9 ವಿಕೆಟ್‍ಗೆ 559 ರನ್ ಕಲೆ ಹಾಕಿತು. ನಂತರ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ 42 ಓವರ್ ಗಳಲ್ಲಿ 2 ವಿಕೆಟ್‍ಗೆ 140 ರನ್ ದಾಖಲಿಸಿದೆ. ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗುಪ್ಟಿಲ್ (1) ಮತ್ತು ಟಾಮ್ ಲ್ಯಾಥಮ್ (36) ಉತ್ತಮ ಆರಂಭ ನೀಡಲಿಲ್ಲ. ನಂತರ ಜತೆಗೂಡಿದ ಕೇನ್ ವಿಲಿಯಮ್ಸನ್ (ಅಜೇಯ 70) ಮತ್ತು ಟೇಲರ್ (ಅಜೇಯ 26) ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ಮೊದಲ ದಿನದಾಟದ ಮೊತ್ತ 2 ವಿಕೆಟ್‍ಗೆ 416 ರನ್ ಗಳಿಂದ 2ನೇ ದಿನದಾಟ ಆರಂಭಿಸಿದ ಆಸೀಸ್, ಉತ್ತಮ ಜತೆ ಯಾಟದ ಕೊರತೆ ಎದುರಿಸಿತು. ವಾರ್ನರ್ 253, ವೋಗ್ಸ್ 41, ಮಾರ್ಷ್ 34 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 133 ಓವರ್‍ಗಳಲ್ಲಿ 556ಕ್ಕೆ 9 (ವಾರ್ನರ್ 253, ಖವಾಜ 121, ಕ್ರೇಗ್ 123ಕ್ಕೆ 3)ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 42 ಓವರ್‍ಗಳಲ್ಲಿ 2 ವಿಕೆಟ್‍ಗೆ 140 (ವಿಲಿಯಮ್ಸನ್ ಅಜೇಯ 70, ಲಾಥಮ್ 36, ಸ್ಟಾರ್ಕ್ 17ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com