ಐಪಿಎಲ್ ಪ್ರಾಯೋಜಕತ್ವದಿಂದ ಹೊರಬರಲು ಪೆಪ್ಸಿಕೋ ನಿರ್ಧಾರ

ಫಿಕ್ಸಿಂಗ್, ಬೆಟ್ಟಿಂಗ್ ಎಂಬ ಭೂತದಿಂದ ಈಗಾಗಲೇ ಹಲವು ಮುಜುಗರಕ್ಕೊಳಗಾಗಿ ಸಂಕಷ್ಟದಲ್ಲಿರುವ ಐಪಿಎಲ್ ಗೆ ಇದೀಗ ಆಘಾತವೊಂದು ಎದುರಾಗಿದ್ದು, ಐಪಿಎಲ್ ನ ಪ್ರಮುಖ ಪ್ರಾಯೋಜಕತ್ವ ಎಂದು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಮುಂಬೈ: ಫಿಕ್ಸಿಂಗ್, ಬೆಟ್ಟಿಂಗ್ ಎಂಬ ಭೂತದಿಂದ ಈಗಾಗಲೇ ಹಲವು ಮುಜುಗರಕ್ಕೊಳಗಾಗಿ ಸಂಕಷ್ಟದಲ್ಲಿರುವ ಐಪಿಎಲ್ ಗೆ ಇದೀಗ ಆಘಾತವೊಂದು ಎದುರಾಗಿದ್ದು, ಐಪಿಎಲ್ ನ ಪ್ರಮುಖ ಪ್ರಾಯೋಜಕತ್ವ ಎಂದು ಹೇಳಲಾಗುತ್ತಿದ್ದ ಪೆಪ್ಸಿಕೋ ಕಂಪನಿಯು ಇದೀಗ ತನ್ನ ಪ್ರಾಯೋಜಕತ್ವದಿಂದ ಹೊರಬರಲು ಶುಕ್ರವಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಿಂದ ತನ್ನ ಘನತೆಯನ್ನು ತಗ್ಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಟೈಟರ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಪೆಪ್ಸಿಕೋ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ತನ್ನ ನಿರ್ಧಾರದ ಬಗ್ಗೆ ಈಗಾಗಲೇ ಪೆಪ್ಸಿಕೋ ಕಂಪನಿ ಪತ್ರವೊಂದನ್ನು ಬರೆದಿದ್ದು, ಪತ್ರವನ್ನು ಐಪಿಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ರಾಮನ್ ಅವರಿಗೆ ಕಳುಹಿಸಿದೆ ಎಂದು ವರದಿಗಳು ತಿಳಿಸಿವೆ.

2013ರಿಂದ 2017ರ ಅವಧಿವರೆಗೆ ಬರೋಬ್ಬರಿ ರು.396 ಕೋಟಿ ರುಪಾಯಿ ಪಾವತಿಸಿರುವ ಪೆಪ್ಸಿಕೋ ಕಂಪನಿ ಐಪಿಎಲ್ ನಲ್ಲಿ ಟೈಟರ್ ಪ್ರಾಯೋಜಕತ್ವವನ್ನು ಪಡೆದಿತ್ತು. ಇದೀಗ ಪ್ರಾಯೋಜಕತ್ವವನ್ನು ಹಿಂಪಡೆಯಲು ಕಂಪನಿ ನಿರ್ಧರಿಸುವುದರಿಂದ ಪಾವತಿ ಮಾಡಿರುವ ಹಣವನ್ನು ವಾಪಸ್ ನೀಡುವಂತೆ ಐಪಿಎಲ್ ಅಧಿಕಾರಿಗಳಿಗೆ ನೋಟಿ ಜಾರಿ ಮಾಡಿದೆ ಎನ್ನಲಾಗಿದೆ.

ಅ.18ರಂದು ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪೆಪ್ಸಿಕೋ ಕಂಪನಿಯು ತನ್ನ ನಿರ್ಧಾರದ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com