ಜೋಹರ್ ಕಪ್ ಹಾಕಿ: ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಆಂಗ್ಲರಿಗೆ ಶರಣಾದ ಭಾರತ

ಸ್ಕಾಟ್ಲೆಂಡ್ ನ ಆಟಗಾರ ಲೂಕ್ ಟೇಲರ್ ಗಳಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಬ್ರಿಟನ್ ಕಿರಿಯರ ಹಾಕಿ ತಂಡ ಸೋಮವಾರ ನಡೆದ ಜೋಹರ್ ಕಪ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜೋಹರ್ ಬಹ್ರು: ಸ್ಕಾಟ್ಲೆಂಡ್ ನ ಆಟಗಾರ ಲೂಕ್ ಟೇಲರ್ ಗಳಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಬ್ರಿಟನ್ ಕಿರಿಯರ ಹಾಕಿ ತಂಡ ಸೋಮವಾರ ನಡೆದ ಜೋಹರ್ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕಿರಿಯರ ತಂಡದ ವಿರುದ್ಧ 4-3 ಅಂತರದಲ್ಲಿ ಜಯ ದಾಖಲಿಸಿತು.

ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 5-1ರಿಂದ ಜಯ ಸಾಧಿಸಿ ಉತ್ಸಾಹದಲ್ಲಿದ್ದ ಹಾಲಿ ಚಾಂಪಿಯನ್ ಭಾರತ ಸೋಮವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ನಿರಾಸೆ ಮಾತ್ರ ಅನುಭವಿಸಿತು. ಇದೇ 14ರಂದು ನಡೆಯಲಿರುವ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಭಾರತ ಅರ್ಜೈಂಟೆನಾವನ್ನು ಎದುರಿಸಲಿದೆ.

ಆಂಗ್ಲರ ಮುನ್ನಡೆ:
ಪಂದ್ಯದ ಆರಂಭದಿಂದಲೂ ಇತ್ತಂಡಗಳ ಆಟಗಾರರು ಉತ್ಸಾಹದಿಂದಲೇ ಕಾದರು. ಆದರೆ ಭಾರತದ ರಕ್ಷಣಾ ವ್ಯೂಹವನ್ನು ಬೇಧಿಸುವಲ್ಲಿ ಯಶಸ್ವಿಯಾದ ಬ್ರಿಟನ್‍ನ ಆಟಗಾರರು 6ನೇ ನಿಮಿಷದಲ್ಲಿ ಮೊದಲು ಗೋಲು ದಾಖಲಿಸಿದರು. ಈ ಗೋಲು ಗಳಿಸಿದ್ದು ಜೇಮ್ಸ್ ಸಿಂಪ್ಸನ್. ಪಂದ್ಯದ  17ನೇ ನಿಮಿಷ ಹಾಗೂ 26ನೇ ನಿಮಿಷದಲ್ಲಿ ಸುಮಿತ್ ಕುಮಾರ್ ಭಾರತಕ್ಕೆ ಮೊದಲ ಗೋಲಿನ ಸಂಭ್ರಮ ತಂದಿತ್ತರು. ಮತ್ತೊಬ್ಬ ಆಟಗಾರ ಮನ್‍ಪ್ರೀತ್ ಜೂನಿಯರ್ 29ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ 3-1 ಮುನ್ನಡೆ ತಂದಿತ್ತರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com