
ಬೆಂಗಳೂರು: ಪ್ರವಾಸಿಗರ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆಯುವ ಹೋರಾಟದಲ್ಲಿ ಕೊನೆಗೂ ಯಶಸ್ವಿಯಾದ ಕರ್ನಾಟಕ ತಂಡ, ವಿದರ್ಭ ವಿರುದ್ಧ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ವಿದರ್ಭ ತಂಡದ ಮೊದಲ ಇನ್ನಿಂಗ್ಸ್ ಅನ್ನು 310ಕ್ಕೆ ಮೊಟಕುಗೊಳಿಸಿದ ಕರ್ನಾಟಕ ಆನಂತರ ತನ್ನ ದ್ವೀತಿಯಾ ಇನ್ನಿಂಗ್ಸ್ ಆರಂಭಿಸಿ ದಿನಾಂತ್ಯಕ್ಕೆ 1 ವಿಕೆಟ್ ಗೆ 93 ರನ್ ಗಳಿಸಿದೆ. ಆರಂಭಿಕ ಕೆ.ಎಲ್ ರಾಹುಲ್, ಹಾಗೂ ಸಮರ್ಥ್ ಭಾನುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಅರ್ಧಶತಕ ವಂಚಿತ ಉತ್ತಪ್ಪ: 40 ರನ್ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಉತ್ಸಾಹದಿಂದಲೇ ತನ್ನ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕರಾದ ರಾಬಿನ್ ಉತ್ತಪ್ಪ ಹಾಗೂ ಕೆ.ಎಸ್ ರಾಹುಲ್ ತಾಳ್ಮೆಯ ಆಟ ಪ್ರದರ್ಶಿಸಿದರು. ಅದರಲ್ಲೂ ವಿದರ್ಭ ಬೌಲರ್‍ಗಳ ತಂತ್ರಗಾರಿಕೆಯನ್ನು ಸಮರ್ಥವಾಗಿ ಎದುರಿಸಿದ ಉತ್ತಪ್ಪ, ಆಗಾಗ ಭರ್ಜರಿ ಹೊಡೆತಗಳನ್ನು ಬಾರಿಸುತ್ತಾ ಕ್ರೀಡಾಂಗಣದಲ್ಲಿದ್ದ ಜನರನ್ನು ರಂಜಿಸಿದರು. ಆದರೆ, ಅರ್ಧಶತಕದಂಚಿಗೆ ಬಂದಿದ್ದಾಗ ಉತ್ತಪ್ಪ (46 ರನ್, 123 ಎಸೆತ 8 ಬೌಂಡರಿ) ಬಂಡೀವರ್ ಗೆ ವಿಕೆಟ್ ಒಪ್ಪಿಸಿದರು.
ಶತಕ ವಂಚಿತ ಬದರೀನಾಥ್: ಇತ್ತ ದಿನಾದಟದ ಮೊದಲ ಸೆಷನ್ ನಲ್ಲೇ ರಾಜ್ಯದ ಬೌಲರ್ ಗಳಿಗೆ ಯಶ ದಕ್ಕಿತು. ಶುಕ್ರವಾರ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ್ದ ವಿದರ್ಭ. ಮೂರನೇ ದಿನದಂದು 138 ರನ್ ಗೆ ಉಳಿದ ಎಂಟು ವಿಕೆಟ್ ಕಳೆದುಕೊಂಡಿತು.
ದಿನದ ಮೊದಲ ಓವರ್ ನ 3 ನೇ ಎಸೆತದಲ್ಲಿ, ಅರವಿಂದ್ ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಗಣೇಶ್ ಸತೀಶ್ ಹಾಗೂ ನಾಯಕ ಎಸ್ . ಬದರಿನಾಥ್ ಜೋಡಿಯನ್ನು ಮುರಿದು ವಿದರ್ಭ ಪತನಕ್ಕೆ ಶ್ರೀಕಾರ ಹಾಕಿದರು.
Advertisement