ಗುರ್ಬಾಜ್ ಸಿಂಗ್ ನಿಷೇಧಕ್ಕೆ ತಡೆಯಾಜ್ಞೆ

ಅಶಿಸ್ತಿನ ಹಿನ್ನೆಲೆಯಲ್ಲಿ ಹಾಕಿ ಆಟಗಾರ ಗುರ್ಬಾಜ್ ಸಿಂಗ್ ಮೇಲೆ ಹೇರಲಾಗಿದ್ದ 9 ತಿಂಗಳ ನಿಷೇಧದ ಶಿಕ್ಷೆಗೆ ಪಂಜಾಬ್ ಹಾಗೂ ಹರ್ಮಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ...
ಗುರ್ಬಾಜ್ ಸಿಂಗ್
ಗುರ್ಬಾಜ್ ಸಿಂಗ್

ನವದೆಹಲಿ: ಅಶಿಸ್ತಿನ ಹಿನ್ನೆಲೆಯಲ್ಲಿ ಹಾಕಿ ಆಟಗಾರ ಗುರ್ಬಾಜ್ ಸಿಂಗ್ ಮೇಲೆ ಹೇರಲಾಗಿದ್ದ 9 ತಿಂಗಳ ನಿಷೇಧದ ಶಿಕ್ಷೆಗೆ ಪಂಜಾಬ್ ಹಾಗೂ ಹರ್ಮಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಕಿ ಇಂಡಿಯಾ ನೀಡಿದ್ದ ಈ ಶಿಕ್ಷೆ ಕಾನೂನು ಬಾಹಿರ ಎಂದು ಬಣ್ಣಿಸಿರುವ ನ್ಯಾಯಾಲಯ, ತಕ್ಷಣಕ್ಕೆ ಜಾರಿಬರುವಂತೆ ತಡೆಯಾಜ್ಞೆ ಆದೇಶ ನೀಡಿತು.

 ಇದಲ್ಲದೆ, ಹಾಕಿ ಇಂಡಿಯಾಕ್ಕೆ ಒಂದು ವಾರದ ಕಾಲ ಗಡುವು ನೀಡಿರುವ ನ್ಯಾಯಾಲಯ, ಈ ಅವಧಿಯಲ್ಲಿ ತನ್ನ ಅಧೀನದಲ್ಲಿರುವ ಆಟಗಾರರ ವ್ಯಾಜ್ಯ ನಿವಾರಣಾ ಸಮಿತಿ ಸಭೆ ಕರೆದು ಗುರ್ಬಾಜ್ ವಿಚಾರದ ಪರಾಮರ್ಶಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com