ಭದ್ರತೆ ಹಿನ್ನೆಲೆ: 5ನೇ ಏಕದಿನ ಪಂದ್ಯಕ್ಕೆ ವಾಸಿಂ ಮತ್ತು ಶೋಯೆಬ್ ಅಲಭ್ಯ

ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ಶೋಯೆಬ್ ಅಕ್ತರ್ ಅವರು ಬರುವ ಪಾಕಿಸ್ತಾನ...
ವಾಸಿಂ ಅಕ್ರಂ ಮತ್ತು ಶೋಯೆಬ್ ಮಲಿಕ್
ವಾಸಿಂ ಅಕ್ರಂ ಮತ್ತು ಶೋಯೆಬ್ ಮಲಿಕ್

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ಶೋಯೆಬ್ ಅಕ್ತರ್ ಅವರು ಬರುವ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಣ 5ನೇ ಏಕದಿನ ಪಂದ್ಯದಂದು ಕ್ರಿಕೆಟ್ ಅಭಿಮಾನಿಗಳಿಗೆ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತು ಕಮೆಂಟರಿ ನೀಡುವುದನ್ನು ನೋಡಲು ಸಾಧ್ಯವಿಲ್ಲ.

ಭದ್ರತೆಯ ಕಾರಣವಾಗಿ ಅವರು ಮುಂಬೈನಲ್ಲಿ ಕಮೆಂಟರಿ ನೀಡದೆ ಸ್ವದೇಶಕ್ಕೆ ವಾಪಾಸ್ಸಾಗಲಿದ್ದಾರೆ. ಕ್ರಿಕಿಇನ್ಫೋ ನೀಡಿರುವ ವರದಿ ಪ್ರಕಾರ, ಇವರಿಬ್ಬರೂ ಇದೇ 23ರಂದು ಚೆನ್ನೈಯಲ್ಲಿ ಆರಂಭವಾಗಲಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಮೆಂಟ್ ಮಾಡಲಿದ್ದಾರೆ ಎಂದು ವಾಸಿಂ ಅಕ್ರಂ ಅವರ ಪ್ರತಿನಿಧಿ ಅರ್ಸಲನ್ ಹೈದರ್ ತಿಳಿಸಿದ್ದಾರೆ.

ಬಿಸಿಸಿಐ ಮತ್ತು ಪಿಸಿಬಿ ನಡುವಣ ಮಾತುಕತೆಯನ್ನು ವಿರೋಧಿಸಿ ನಿನ್ನೆ ಮುಂಬೈಯಲ್ಲಿ ಶಿವಸೇನಾ ಕಾರ್ಯಕರ್ತರು ಭಾರತೀಯ ಕ್ರಿಕೆಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ ಅಂಪೈರ್ ಅಲೀಮ್ ದಾರ್ ನನ್ನು ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹಿಂತೆಗೆದುಕೊಂಡಿತ್ತು.

 ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಯಾವುದೇ ಗುಂಪಿನ ಬೆದರಿಕೆಗಳಿಂದ ಅಂಪೈರ್ ಅನುರಾಕ್ ಠಾಕೂರ್ ಅವರ ಇರುವಿಕೆ ಮೇಲೆ ಪರಿಣಾಮ ಬೀರುವುದಿಲ್ಲ. ಗುಜರಾತ್ ತೀರ ಜಿಲ್ಲೆಯಾದ ಸೌರಾಷ್ಟ್ರದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಯಿತ್ತು. ರಾಜಕೋಟ್ ನಲ್ಲಿ ಸುಮಾರು 50 ಸಾವಿರ ಮಂದಿ ಸೇರುವ ಸಾಧ್ಯತೆಯಲ್ಲಿದ್ದರು. ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ಭಾರತ, ಮುಂದಿನ ವರ್ಷ T20 ವಿಶ್ವಕಪ್ ನ ಆತಿಥೇಯ ವಹಿಸಲಿದ್ದು, ಪ್ರತಿಯೊಬ್ಬ ಭಾರತೀಯನೂ ಕೂಡ ಕ್ರೀಡಾ ಮನೋಭಾವವನ್ನು ಜೀವಂತವಾಗಿ ಉಳಿಸಬೇಕು ಎಂದು ಠಾಕೂರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com