
ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐದು ಏಕ ದಿನ ಪಂದ್ಯಗಳಿಗೆ ಭಾರತ ತಂಡದವನ್ನು ಸೆ.20 ರಂದು ಪ್ರಕಟ ಮಾಡಲಾಗುತ್ತದೆ.
ಸೆ.29 ರಿಂದ ಪಾಲಂ ಏರ್ ಫೋರ್ಸ್ ಗ್ರೌಂಡ್ ನಲ್ಲಿ ದಕ್ಷಿಣ ಆಫ್ರಿಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಸೆ.20 ರಂದು ಬೆಂಗಳೂರಿನಲ್ಲಿ ಬಿಸಿಸಿಐ ನ ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟ ಮಾಡಲಾಗುತ್ತದೆ.
ಆಯ್ಕೆ ಸಮಿತಿ ಸಭೆ ಮುಗಿದ ನಂತರ ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಕೂರ್, ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಂಡವನ್ನು ಪ್ರಕಟ ಮಾಡಲಿದ್ದಾರೆ.
Advertisement