ನಿರೀಕ್ಷೆ ಸುಳ್ಳು ಮಾಡಿದ ಭೇಟಿ

ಬಿಸಿಸಿಐ ಅಧ್ಯಕ್ಷ ಗಾದಿಗೆ ಹೆಚ್ಚಿದ ಸ್ಪರ್ಧೆಯ ಹಿನ್ನೆಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಎನ್. ಶ್ರೀನಿವಾಸನ್ ಹಾಗೂ ಶರದ್ ಪವಾರ್ ನಡುವಿನ ಭೇಟಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ...
ಶ್ರೀನಿವಾಸನ್ ಮತ್ತು ಶರದ್ ಪವಾರ್ (ಸಂಗ್ರಹ ಚಿತ್ರ)
ಶ್ರೀನಿವಾಸನ್ ಮತ್ತು ಶರದ್ ಪವಾರ್ (ಸಂಗ್ರಹ ಚಿತ್ರ)

ನವದೆಹಲಿ: ಬಿಸಿಸಿಐ ಅಧ್ಯಕ್ಷ ಗಾದಿಗೆ ಹೆಚ್ಚಿದ ಸ್ಪರ್ಧೆಯ ಹಿನ್ನೆಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಎನ್. ಶ್ರೀನಿವಾಸನ್ ಹಾಗೂ ಶರದ್ ಪವಾರ್ ನಡುವಿನ ಭೇಟಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಭಾರತೀಯ ಕ್ರಿಕೆಟ್ ಲೋಕದ ಎರಡು ಧೃವಗಳಾದ ಈ ಇಬ್ಬರ ಭೇಟಿ, ಹಾಲಿ ಬಿಸಿಸಿಐ ಅಧ್ಯಕ್ಷೀಯ ಆಯ್ಕೆ ಕಸರತ್ತಿನಲ್ಲಿ ಹೊಸ ತಿರುವು ತರಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಇಬ್ಬರೂ ಧುರೀಣರು ಮಾಜಿ ಕೇಂದ್ರ  ಸಚಿವ ಹಾಗೂ ಎನ್‍ಸಿಪಿ ನಾಯಕ ಪ್ರಫುಲ್ ಪಟೇಲ್ ಮನೆಯಲ್ಲಿ ಶುಕ್ರವಾರ ತಡರಾತ್ರಿ ಭೇಟಿಯಾಗಿ ಒಂದೆರರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ತಮ್ಮ ವೈಯುಕ್ತಿಕ  ಪ್ರತಿಷ್ಠೆಗೆ ಅಗತ್ಯವಾದ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿಲ್ಲದಿರುವುದನ್ನು ಪರಸ್ಪರ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ತಮ್ಮ ನಡುವಿನ ಪ್ರತಿಷ್ಠೆಯನ್ನು ಬದಿಗಿಟ್ಟು ವಿವಿಧ ವಲಯಗಳ ಕ್ರಿಕೆಟ್ ಸಂಸ್ಥೆಗಳ  ಅಧಿಕಾರಿಗಳ ವಿಶ್ವಾಸವನ್ನು ಗಳಿಸಿ ಆನಂತರವಷ್ಟೇ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಅಧ್ಯಕ್ಷ ಗಾದಿಗೆ ತರಲು ಯತ್ನಿಸಲು ಪರಸ್ಪರ ಸಮ್ಮತಿಸಿದ್ದಾರೆ ಎಂದು ಎನ್ ಡಿವಿ ವರದಿ ಹೇಳಿದೆ

ಇಲ್ಲೂ ನಿರಾಸೆ!
ನಾಗ್ಪುರದಲ್ಲಿ ಪವಾರ್ ಅವರನ್ನು ಭೇಟಿಯಾದ ಮರುದಿನ ಗುರುವಾರ, ಶ್ರೀನಿವಾಸನ್ ಅವರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ, ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದರು. ಆದರೆ,  ವಾಸ್ತವ ವಾಗಿ ಇದು ಶ್ರೀನಿವಾಸನ್‍ರ ಶಕ್ತಿ ಪ್ರದರ್ಶನವಾಗಿತ್ತು. ಆದರೆ, ಶ್ರೀನಿವಾಸನ್ ಅವರ ಈ ಯತ್ನ ಫಲ ನೀಡಿಲ್ಲ. ಅವರ ಈ ಸಭೆಗೆ ಅಗತ್ಯ ಸಂಖ್ಯೆಯ ವಲಯಮಟ್ಟದ ಕ್ರಿಕೆಟ್ ಪ್ರತಿನಿಧಿಗಳು  ಭಾಗವಹಿಸಿರಲಿಲ್ಲ. ಮಾಜಿ ಕ್ರಿಕೆಟಿಗರ ಬ್ರಿಜೇಶ್ ಪಟೇಲ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಹಾಗೂ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಪದಾಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ಬೆಂಬಲ ಸೂಚಿಸಿದರೂ, ಶ್ರೀನಿವಾಸನ್ ಬೆಂಬಲಿಗರೆಂದು ಹೇಳಲಾಗಿದ್ದ ಆರು ವಲಯಗಳಲ್ಲಿ ಐದು ವಲಯ ಪ್ರತಿನಿಧಿಗಳೂ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com