ಐಪಿಎಲ್ ಸೀಸನ್ 9ಕ್ಕೆ ವರ್ಣರಂಜಿತ ಚಾಲನೆ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವರ್ಣರಂಜಿತ ಚಾಲನೆ ಸಿಕ್ಕಿದೆ...
ಐಪಿಎಲ್ 9ರ ಚಾಲನಾ ಸಮಾರಂಭ
ಐಪಿಎಲ್ 9ರ ಚಾಲನಾ ಸಮಾರಂಭ
Updated on

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವರ್ಣರಂಜಿತ ಚಾಲನೆ ಸಿಕ್ಕಿದೆ.

ಕಾರ್ಯಕ್ರಮದಲ್ಲಿ ಬಾಲಿವುಡ್ ಮಂದಿ ಹಾಡಿ ಕುಣಿದು ಸಮಾರಂಭದ ಮೇರುಗನ್ನು ಹೆಚ್ಚಿಸಿದರು. ಕತ್ರಿನಾ ಕೈಫ್, ಜಾಕ್ವಲಿನ್ ಫರ್ನಾಂಡಿಸ್, ರಣವೀರ್ ಸಿಂಗ್ ನೃತ್ಯಕ್ಕೆ ಆಟಗಾರರು ಫೀದಾ ಆದರು. ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ವೆಸ್ಟ್ ಇಂಡೀಸ್ ಆಟಗಾರ ಡ್ವೇಯ್ನ್ ಬ್ರಾವೋ ಚಾಂಪಿಯನ್ ಗೀತೆಯನ್ನು ಹಾಡಿದರು. ಬಾಲಿವುಡ್ ನ ಹನಿ ಸಿಂಗ್ ಸಹ ತಮ್ಮ ನೆಚ್ಚಿನ ಗೀತೆಗಳನ್ನು ನೆರೆದಿದ್ದವರ ಮುಂದೆ ಪ್ರದರ್ಶಿಸಿದರು.

ಮೊದಲಿಗೆ ತಂಡದ ನಾಯಕರನ್ನು ವೇದಿಕೆ ಮೇಲೆ ಕರೆದ ರವಿಶಾಸ್ತ್ರಿ ಅವರು ಅವರಿಂದ ಸಹಿ ಮಾಡಿಸಿದರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ, ಡೆಲ್ಲಿ ಡೆವಿಲ್ಸ್ ಪರ ಜಹೀರ್ ಖಾನ್, ಗುಜರಾತ್ ಲಯನ್ಸ್ ಪರ ಸುರೇಶ್ ರೈನಾ, ಕಿಂಗ್ಸ್ ಇಲೆವನ್ ಪಂಜಾಬ್ ಪರ ಡೇವಿಡ್ ಮಿಲ್ಲರ್, ಕೊಲ್ಕತ್ತಾ ನೈಟ್ ರೈಡರ್ಸ್ ಪರ ಗೌತಮ್ ಗಂಭೀರ್, ರೈಸಿಂಗ್ ಪುಣೆ ಪರ ಮಹೇಂದ್ರ ಸಿಂಗ್ ಧೋನಿ, ಸನ್ ರೈರ್ಸಸ್ ಹೈದರಬಾದ್ ಪರ ಡೇವಿಡ್ ವಾರ್ನರ್ ಸಹಿ ಮಾಡಿದರು.

ಟಿ20 ವಿಶ್ವಕಪ್ ಬೆನ್ನಲ್ಲೇ ಐಪಿಎಲ್ ಸೀಸನ್ 9 ಟೂರ್ನಿ ಆರಂಭವಾಗುತ್ತಿರುವುದರಿಂದ ಈ ತಂಡಗಳ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಉದ್ಘಾಟನಾ ಪಂದ್ಯ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ತಂಡಗಳ ನಡುವೆ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com