ವಾಂಗ್ ಮಣಿಸಿದ್ದು ನನ್ನ ವೃತ್ತಿ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು: ಸಿಂಧು

ರಿಯೋ ಒಲಿಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂಬರ್ 2 ಶ್ರೇಯಾಂಕಿತೆ ಚೀನಾದ ಯಿಹಾನ್ ವಾಂಗ್ ರನ್ನು ಸೋಲಿಸಿದ್ದು...
ಪಿವಿ ಸಿಂಧು
ಪಿವಿ ಸಿಂಧು
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂಬರ್ 2 ಶ್ರೇಯಾಂಕಿತೆ ಚೀನಾದ ಯಿಹಾನ್ ವಾಂಗ್ ರನ್ನು ಸೋಲಿಸಿದ್ದು ನನ್ನ ವೃತ್ತಿ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಎಂದು ಭಾರತದ ಪಿವಿ ಸಿಂಧು ಸಂಭ್ರಮ ಹಂಚಿಕೊಂಡಿದ್ದಾರೆ. 
ಲಂಡನ್ ಒಲಿಂಪಿಕ್ಸ್ ನ ಬೆಳ್ಳಿ ಪದಕ ವಿಜೇತೆ ಯಿಹಾನ್ ವಾಂಗ್ ವಿರುದ್ಧ ಅದ್ಭುತವಾಗಿ ಆಡಿದ್ದ ಸಿಂಧು ಸೆಮಿಫೈನಲ್ ತಲುಪಿದ್ದು ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ರಿಯೋ ಒಲಿಂಪಿಕ್ಸ್ ನನಗೆ ವಿಭಿನ್ನ ಅನುಭವ ನೀಡುತ್ತಿದೆ. ಇದು ನನ್ನ ಜೀವನದ ಅದ್ಭುತ ಕ್ಷಣ ಎನ್ನಬಹುದು ಎಂದು ವಿಶ್ವದ 10ನೇ ರ್ಯಾಂಕ್ ನ ಸಿಂಧೂ ಹೇಳಿದ್ದಾರೆ. 
ಸೆಮಿಫೈನಲ್ ಪ್ರವೇಶಿರುವ ಸಿಂಧೂ ಸೆಮಿಸ್ ನಲ್ಲಿ ಜಪಾನಿನ ನೊಜೊಮಿ ಓಕುಹರ ವಿರುದ್ಧ ಸೆಣಸಲಿದ್ದು, ನೊಜೊಮಿ ವಿರುದ್ಧ ಉತ್ತಮವಾಗಿ ಆಡುವ ಭರವಸೆ ನೀಡಿದ್ದಾರೆ. 
ಒಲಿಂಪಿಕ್ಸ್ ಪದಕ ಗೆಲ್ಲುವ ಒತ್ತಡ ಇದೆಯೇ ಎಂದು ಪ್ರಶ್ನಿಸಿದಾಗ ಸದ್ಯ ಆಟದ ಬಗ್ಗೆಯಷ್ಟೇ ಗಮನ ಹರಿಸುತ್ತಿದ್ದೇನೆ. ಚೆನ್ನಾಗಿ ಆಡಿದರೆ ಪದಕ ಬಂದೇ ಬರುತ್ತದೆ ಎಂದು ಸಿಂಧು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com