ರಾಂಚಿ: ಪ್ರವಾಸಿ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ಭಾರತ ವನಿತಾ ತಂಡ 34 ರನ್ ಗೆಲುವು ಪಡೆದಿದೆ.
ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 130 ರನ್ ಗಳಿಸಿತು. 131 ರನ್ ಗಳ ಗುರಿ ಪಡೆದ ಶ್ರೀಲಂಕಾ ನಿಗಧಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ 34 ರನ್ ಗಳಿಂದ ಸೋಲು ಅನುಭವಿಸಿತು.
ಭಾರತ ಪರ ಮಿಥಾಲಿ ರಾಜ್ 3, ವಿ.ಆರ್ ವನಿತಾ 12, ಸ್ಮತಿ ಮಂದಾನ 35, ಹರ್ಮನ್ ಪ್ರೀತ್ ಕೌರ್ 36, ಅನುಜಾ ಪಾಟೀಲ್ 22 ಗಳಿಸಿದರು.
ಶ್ರೀಲಂಕಾ ಪರ ಸುಗಂಧಿಕಾ ಕುಮಾರಿ 3, ಕೌಸಲ್ಯ 2 ವಿಕೆಟ್ ಪಡೆದಿದ್ದಾರೆ.