
ಮುಂಬೈ: 15ರ ಹರೆಯದ ಬಾಲಕನೊಬ್ಬ ಕ್ರಿಕೆಟ್ ಲೋಕದಲ್ಲೊಂದು ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದು, 323 ಚೆಂಡುಗಳಲ್ಲಿ 1009 ರನ್ ಗಳನ್ನು ಗಳಿಸುವ ಮೂಲಕ ಪ್ರಣವ್ ಧನವಾಡೆ ಎಂಬ ಬಾಲಕ 116 ವರ್ಷದ ದಾಖಲೆಯನ್ನು ಮುರಿದ್ದಾನೆ.
ಪ್ರಣವ್ ಧನವಾಡೆ ದಾಖಲೆ ಮುರಿದ ವಿದ್ಯಾರ್ಥಿಯಾಗಿದ್ದು, ಈಗ ಕಲ್ಯಾಣ್ ಕೆಸಿ ಗಾಂಧಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ. 16 ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಕಲ್ಯಾಣ್ ಯೂನಿಯನ್ ಕ್ರಿಕೆಟ್ ಅಕಾಡೆಮಿ ನಡೆಸಿದ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಪ್ರಣವ್ ಕೇವಲ 323 ಎಸೆತಗಳಲ್ಲಿ 129 ಬೌಂಡರ್, 59 ಸಿಕ್ಸರ್ ಬಾರಿಸಿ ಅಜೇಯ 1009 ರನ್ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾನೆ.
116 ವರ್ಷಗಳ ಹಿಂದೆ 1899ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯೊಂದರ ಪಂದ್ಯದಲ್ಲಿ ನಾರ್ತ್ ಟೌನ್ ಹೌಸ್ ತಂಡದ ವಿರುದ್ಧ, ಕ್ಲಾರ್ಕ್ ಹೌಸ್ ತಂಡದ ಪರ ಆಡಿದ್ದ ಎಇಜೆ ಕೊಲ್ಲಿನ್ಸ್ ಅವರು 628 ರನ್ ಗಳನ್ನು ಗಳಿಸಿದ್ದರು. ಇದೀಗ ಧನವಾಡೆ ಅವರು ಕೊಲ್ಲಿನ್ಸ್ ಅವರ ದಾಖಲೆಯನ್ನು ಮುರಿದು, ಹೊಸ ದಾಖಲೆಯನ್ನು ಬರೆದಿದ್ದಾರೆ.
ದಾಖಲೆ ಸೃಷ್ಟಿಸಿರುವ ಪ್ರಣವ್ ಧನವಾಡೆ ಮುಂಬೈ ನಗರದಲ್ಲಿ ಆಟೋ ಚಾಲಕರೊಬ್ಬರ ಪುತ್ರನಾಗಿದ್ದು, 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.
Advertisement