
ಬೆಂಗಳೂರು: ಟೂರ್ನಿಯಲ್ಲಿ ಹೋರಾಟಕಾರಿ ಪ್ರದರ್ಶನ ನೀಡಿದರೂ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿರುವ ಬೆಂಗಳೂರು ಟಾಪ್‍ಗನ್ಸ್ ತಂಡ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್‍ನಲ್ಲಿ ನಾಕೌಟ್ ಸುತ್ತಿಗೆ ಪ್ರವೇಶಿಸಲು ಚೆನ್ನೈ ಸ್ಮ್ಯಾಷರ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಬುಧವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಲೀಗ್ ಪಂದ್ಯದಲ್ಲಿ ಬೆಂಗಳೂರು ಟಾಪ್ ಗನ್ಸ್ ತಂಡ ಐದು ಸೆಣಸಾಟದಲ್ಲಿ ಎರಡು ಟ್ರಂಪ್ ಮ್ಯಾಚ್ ಸೇರಿದಂತೆ ನಾಲ್ಕರಲ್ಲಿ ಜಯಿಸಬೇಕಿದೆ ಆಗ ಮಾತ್ರ ಮುಂದಿನ ಹಂತಕ್ಕೆ ಪ್ರವೇಶಿಸಲು ಅರ್ಹತೆ ಪಡೆಯಲಿದೆ. ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಿಂದ ಕೇವಲ 8 ಅಂಕಗಳನ್ನು ಸಂಪಾದಿಸಿರುವ ಬೆಂಗಳೂರು ಟಾಪ್‍ಗನ್ಸ್ 6ನೇ ಹಾಗೂ ಅಂತಿಮ ಸ್ಥಾನದಲ್ಲಿದೆ. 6 ತಂಡಗಳ ಟೂರ್ನಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.
ಪಂದ್ಯದ ಕುರಿತ ಮಾತನಾಡಿದ ತಂಡದ ಕೋಚ್ ಅರವಿಂದ್ ಭಟ್, ``ತಂಡ ಈಗಲೂ ಸಕಾರಾತ್ಮಕವಾಗಿದೆ. ಅಂತಿಮ ಪಂದ್ಯದಲ್ಲಿ ಉತ್ತಮ ಅಂತರದಲ್ಲಿ ಜಯಿಸಿದರೆ ಅವಕಾಶವಿದೆ'' ಎಂದರು.
Advertisement