
ಮುಂಬೈ: ಫಿಕ್ಸಿಂಗ್ ಹಗರಣದಲ್ಲಿ ಆರೋಪಿಗಳೆ ನಿಸಿರುವ ಅಜಿತ್ ಚಾಂಡೀಲಾ ಹಾಗೂ ಹಿಕೇನ್ ಶಾ ಅವರ ಕ್ರಿಕೆಟ್ ಭವಿಷ್ಯ ಸೋಮವಾರ ನಿರ್ಧಾರವಾ ಗಲಿದೆ.
ಬಿಸಿಸಿಐನ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದಲ್ಲಿ ನಡೆಯಲಿ ರುವ ಬಿಸಿಸಿಐ ಶಿಸ್ತುಪಾಲನಾ ಸಮಿತಿಯ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಐಪಿಎಲ್‍ನ 2009ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ದಲ್ಲಿದ್ದ ಅಜಿತ್ ಚಾಂಡೀಲಾ, ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪ ಹೊತ್ತಿದ್ದರು. ಇನ್ನು, ಮುಂಬೈ ರಣಜಿ ತಂಡದ ಸದಸ್ಯರಾಗಿದ್ದ ಹಿಕೇನ್ ಶಾ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹೊಂದಿದ್ದಾರೆ. ಕಳೆದ ವರ್ಷ ಡಿ. 24ರಂದು ಈ ಇಬ್ಬರ ಭವಿಷ್ಯ ನಿರ್ಧಾರವಾಗಬೇ ಕಿತ್ತು. ಅಂದು ಸಭೆ ಸೇರಿದ್ದ ಬಿಸಿಸಿಐ ಶಿಸ್ತು ಪಾಲನಾ ಸಮಿತಿಯ ಮುಂದೆ ಹಾಜರಾಗಿದ್ದ ಚಾಂಡೀಲಾ, ಶಾ ತಮ್ಮ ಹೇಳಿಕೆಗಳನ್ನು ನೀಡಿದ್ದರು.
ಅದಲ್ಲದೆ, ಐಪಿಎಲ್ 2009ರ ಆವೃತ್ತಿಯಲ್ಲಿ ಫಿಕ್ಸಿಂಗ್ ಆರೋಪಿಯಾಗಿರುವ ಅಂಪೈರ್ ಅಸಾದ್ ರವೂಫ್ ಬಗ್ಗೆಯೂ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಹಾಗಾಗಿ, ವಿಚಾರಣೆಯನ್ನು ಸಮಿತಿಯು ಜ.5ಕ್ಕೆ ಮುಂದೂಡಲಾಗಿತ್ತು. ಅಂದು ಪುನಃ ಸಭೆ ಸೇರಿದ ಸಮಿತಿಯ ಮುಂದೆ ಹಾಜರಾಗಿದ್ದ ಶಾ, ತಾವು ಸಲ್ಲಿಸಬೇಕಿರುವ ಸ್ಪಷ್ಟನೆಯನ್ನು ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ಜ.18ಕ್ಕೆ ಮುಂದೂಡಿತ್ತು.
Advertisement