ಐ-ಲೀಗ್ ಫುಟ್ಬಾಲ್ ಪಂದ್ಯಾವಳಿ: ಆತಿಥೇಯ ಮುಂಬೈಗೆ ಮೊದಲ ಜಯ

ಆತಿಥೇಯ ಮುಂಬೈ ಎದುರು ಪಂದ್ಯದ ಮೊದಲಾರ್ಧದಲ್ಲೇ 0-2 ಗೋಲುಗಳ ಹಿನ್ನೆಡೆ ಅನುಭವಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಈ ಋತುವಿನ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೊದಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಆತಿಥೇಯ ಮುಂಬೈ ಎದುರು ಪಂದ್ಯದ ಮೊದಲಾರ್ಧದಲ್ಲೇ 0-2 ಗೋಲುಗಳ ಹಿನ್ನೆಡೆ ಅನುಭವಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಈ ಋತುವಿನ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೊದಲ ಸೋಲನುಭವಿಸಿದೆ.

ಇಲ್ಲಿನ ಕೂಪರ್ ಏಜ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡದ ಪರ ಮಿಡ್ ಫೀಲ್ಡರ್, ಜಪಾನ್ ಮೂಲದ ಅರಾಟ ಇಜುಮಿ ಹಾಗೂ ಉತ್ತರ ಕೊರಿಯಾ ಮೂಲದ ಡಿಫೆರೆಂಟ್ ಮಿನ್ -ಚೊಲ್ ಸನ್ ಕ್ರಮವಾಗಿ 5 ಮತ್ತು 11ನೇ ನಿಮಿಷದಲ್ಲಿ ಗೋಲು ಹೊಡೆದರು.ಇದರ ನೆರವಿನೊಂದಿಗೆ ಮುಂಬೈ, ಬೆಂಗಳೂರು ಎಫ್ ಸಿ ವಿರುದ್ಧ 2-0 ಗೋಲುಗಳ ಗೆಲುವು ಕಂಡಿತು.

ಸತತ ಮೂರು ಪಂದ್ಯಗಳಲ್ಲಿ ಜಯಶಾಲಿಯಾಗಿದ್ದ ಬಿಎಫ್ ಸಿ  ತಂಡ ಮುಂಬೈ ವಿರುದ್ಧ ಪೈಪೋಟಿ ನೀಡಿದರೂ, ಗೋಲು ಗಳಿಸಲು ವಿಫಲವಾಗಿ ಸೋಲಪ್ಪಿತು. ಇನ್ನೊಂದೆಡೆ ಮುಂಬೈ ಬಿಎಫ್ ಸಿ ವಿರುದ್ಧ ಮೊದಲ ಬಾರಿಗೆ ಜಯದ ಸವಿಯುಂಡಿತಲ್ಲದೆ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿತು.

ಬಿಎಫ್ ಸಿ ತನ್ನ ಮುಂದಿನ ಪಂದ್ಯವನ್ನು ಇದೇ ಶನಿವಾರದಂದು ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದ್ದು, ಈ ಪಂದ್ಯವನ್ನು ಅದು ಗೆದ್ದು ಮತ್ತೆ ಜಯದ ಹಾದಿಗೆ ಮರಳಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com