ಟಿ20: ಮುಗ್ಗರಿಸಿದ ಆಸೀಸ್, ಸರಣಿ ಟೀಂ ಇಂಡಿಯಾ ಕೈವಶ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪಾರಮ್ಯ ಮೆರೆದಿದ್ದು, ಟಿ20 ಸರಣಿ ಕೈವಶ ಮಾಡಿಕೊಂಡಿದೆ...
ಟೀಂ ಇಂಡಿಯಾ
ಟೀಂ ಇಂಡಿಯಾ

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪಾರಮ್ಯ ಮೆರೆದಿದ್ದು, ಟಿ20 ಸರಣಿ ಕೈವಶ ಮಾಡಿಕೊಂಡಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.  

ಭಾರತ ನೀಡಿದ 185 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆಟಗಾರರು ಭೂಮ್ರ ಹಾಗೂ ರವೀಂದ್ರ ಜಡೇಜಾ ಅವರ ಮಾರಕ ದಾಳಿಗೆ ತತ್ತರಿಸಿದರು. ನಿಗದಿತ 20 ಓವರ್ ಗಳಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದ್ದು, 27 ರನ್ ಗಳಿಂದ ಟೀಂ ಇಂಡಿಯಾ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ಪರ ಫಿಂಚ್ 74, ಮಾರ್ಷ್ 23, ಲೇನ್ 2, ಮ್ಯಾಕ್ಸ್ ವೆಲ್ 1, ವಾಟ್ಸನ್ 15,  ಫಾಲ್ಕನರ್ 10, ಹಸ್ಟಿಂಗ್ಸ್ 4 ಟೈ 4 ರನ್ ಗಳಿಸಿ ಔಟಾದರೆ, ವಾಡೆ ಅಜೇಯ 16 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾ ಪರ ಭೂಮ್ರ, ಜಡೇಜಾ ತಲಾ 2 ವಿಕೆಟ್ ಪಡೆದರೆ, ಆರ್. ಅಶ್ವಿನ್, ಪಾಂಡ್ಯ, ಯುವರಾಜ್ ಸಿಂಗ್ ತಲಾ 1 ವಿಕೆಟ್ ಪಡೆದಿದ್ದಾರೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 60, ಶಿಖರ್ ಧವನ್ 42, ಎಂಎಸ್ ಧೋನಿ 14 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಅಜೇಯ 59 ರನ್ ಹಾಗೂ ಸುರೇಶ್ ರೈನಾ ಅಜೇಯ 0 ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪರ ಟೈ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com