
ಸಿಡ್ನಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾ೦ತ್, ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿ೦ಟನ್ ಟೂನಿ೯ಯಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿ೦ಗಲ್ಸ್ ವಿಭಾಗದ 8ರ ಘಟ್ಟದ ಪ೦ದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು 2013ರ ವಿಶ್ವ ಚಾ೦ಪಿಯನ್ ಥಾಯ್ಲೆ೦ಡ್‍ನ ಇ೦ಥೋನನ್ ರಚನಾಕ್ ವಿರುದ್ಧ 28-26, 21-16 ನೇರ ಸೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದರು. ಬರೊಬ್ಬರ 56 ನಿಮಿಷಗಳ ಕಾಲ ನಡೆದ ಈ ಸೆಣಸಾಟದಲ್ಲಿ ಆರಂಭದಿಂದಲೂ ಸೈನಾ ನೆಹ್ವಾಲ್ ಮೇಲುಗೈ ಸಾಧಿಸುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಶನಿವಾರ ನಡೆಯಲಿರುವ ಸೆಮಿಫೈನಲ್ ಪ೦ದ್ಯದಲ್ಲಿ ಸೈನಾ ಚೀನಾದ 4ನೇ ಶ್ರೇಯಾಂಕಿತೆ ವಾ೦ಗ್ ಯಿಹಾನ್‍ರನ್ನು ಎದುರಿಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಪುರುಷರ ಸಿ೦ಗಲ್ಸ್ ವಿಭಾಗದ ಕ್ವಾಟ೯ರ್ ಫೈನಲ್ ನಲ್ಲಿ ವಿಶ್ವ ನ೦.13 ಕಿಡಾಂಬಿ ಶ್ರೀಕಾ೦ತ್ 21-18, 21-17 ನೇರ ಸೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಕೇವಲ 36 ನಿಮಿಷಗಳ ಕದನದಲ್ಲಿ ಕೊರಿಯಾದ ಕ್ವಾ೦ಗ್ ಹೀ ಹಿಯೊರನ್ನು ಶ್ರೀಕಾಂತ್ ಮಣಿಸಿದರು. ಪಂದ್ಯದ ಯಾವುದೇ ಹಂತದಲ್ಲಿಯೂ ತಮ್ಮ ಹಿಡಿತ ಸಡಿಲಿಸದ ಶ್ರೀಕಾಂತ್ ಅಂತಿಮವಾಗಿ 21-18, 21-17 ನೇರೆ ಸೆಟ್ ಗಳ ಅಂತರದಲ್ಲಿ ಗೆದ್ದು ಬೀಗಿದರು. ಮು೦ದಿನ ಸುತ್ತಿನ ಪಂದ್ಯದಲ್ಲಿ ಶ್ರೀಕಾ೦ತ್ ಡೆನ್ಮಾಕ್‍೯ ಹಾನ್ಸ್ ಕ್ರಿಸ್ಟಿಯನ್ ವಿಟ್ಟಿ೦ಗ್‍ಹಸ್‍ರನ್ನು ಎದುರಿಸಲಿದ್ದಾರೆ.
Advertisement