ಮುಂದುವರೆದ ಭಾರತದ ಗೆಲುವಿನ ಸರಣಿ; ಲಂಕಾ ವಿರುದ್ಧ 5 ವಿಕೆಟ್ ಜಯ

ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತದ ಗೆಲುವಿನ ಸರಣಿ ಮುಂದುವರೆದಿದ್ದು, ಮೀರ್ ಪುರದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಐದು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ...
ಲಂಕಾ ವಿರುದ್ಧ ಗೆದ್ದ ಭಾರತ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಲಂಕಾ ವಿರುದ್ಧ ಗೆದ್ದ ಭಾರತ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಮೀರ್ ಪುರ: ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತದ ಗೆಲುವಿನ ಸರಣಿ ಮುಂದುವರೆದಿದ್ದು, ಮೀರ್ ಪುರದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಐದು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಏಷ್ಯಾಕಪ್ ಟಿ20 ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಟಿ20 ವಿಶ್ವ ಚಾಂಪಿಯನ್ ಶ್ರೀಲಂಕಾ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದ ಧೋನಿ ಬಳಗ ಟೂರ್ನಿಯಲ್ಲಿ ಪ್ರಶಸ್ತಿ ಹಂತಕ್ಕೇರಿದ ಮೊದಲ ತಂಡವೆನಿಸಿಕೊಂಡಿದೆ. ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 9 ವಿಕೆಟ್‌ಗೆ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕಪುಗಡೆರಾ ಗಳಿಸಿದ 30 ರನ್ ಗಳೇ ಶ್ರೀಲಂಕಾದ ಪರ ವೈಯುಕ್ತಿಕ ಅತ್ಯಧಿಕ ರನ್ ಆಗಿತ್ತು.

ಉಳಿದಂತೆ ದಿಲ್ಶಾನ್ (18 ರನ್), ಮ್ಯಾಥ್ಯೂಸ್ (18 ರನ್), ಸಿರಿವರ್ದನ (22 ರನ್), ಪರೆರಾ (17 ರನ್) ಮತ್ತು ಕುಲಶೇಖರ (13 ರನ್) ಅವರನ್ನು ಹೊರತು ಪಡಿಸಿದರೆ ಲಂಕಾದ ಇನ್ನಾವುದೇ ಆಟಗಾರ ಕೂಡ ಎರಡಂಕಿ ಮೊತ್ತ ಮುಟ್ಟಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ ನಿಗದಿತ 20 ಓವರ್ ಗಳಲ್ಲಿ 138 ರನ್ ಗಳಿಗೆ ಆಲ್ ಔಟ್ ಆಯಿತು. ಭಾರತ ಪರ ಆಶೀಶ್ ನೆಹ್ರಾ 1 ವಿಕೆಟ್ ಗಳಿಸಿದರೆ, ಬುಮ್ರಾಹ್, ಪಾಂಡ್ಯಾ ಮತ್ತು ಆರ್. ಅಶ್ವಿನ್ ತಲಾ 2 ವಿಕೆಟ್ ಕಬಳಿಸಿದರು.

ಲಂಕಾ ನೀಡಿದ 138 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ ಶಿಖರ್ ಧವನ್ ಅವರ ವಿಕೆಟ್ ಅನ್ನು ಬಹು ಬೇಗನೆ ಕಳೆದುಕೊಂಡಿತು. ಬಳಿಕ ರೋಹಿತ್ ಶರ್ಮಾ ಕೂಡ ಕೇವಲ 15 ರನ್ ಗಳಿಸಿ ಔಟ್ ಆದರು. ಬಳಿಕ ಜೊತೆಗೂಡಿದ ಕೊಹ್ಲಿ ಮತ್ತು ಸುರೇಶ್ ರೈನಾ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ ಈ ಹಂತದಲ್ಲಿ 25 ರನ್ ಗಳಿಸಿದ್ದ ಸುರೇಶ್ ರೈನಾ ಶನಕಾ ಬೌಲಿಂಗ್ ನಲ್ಲಿ ಕುಲಶೇಖರ ಅವರಿಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಬಂದ ಯುವರಾಜ್ ಸಿಂಗ್ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಜೊತೆಗೂಡಿ ಭಾರತವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಆದರೆ ಈ ಹಂತದಲ್ಲಿ ಪೆರೆರಾ ಬೌಲಿಂಗ್ ನಲ್ಲಿ ಯುವಿ ಔಟ್ ಆದರು. ಈ ನಡುವೆ ಕೊಹ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ಬಂದ ಪಾಂಡ್ಯಾ ಕೂಡ ಹೆರಾತ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ನಂತರ ವಿರಾಟ್ ಕೊಹ್ಲಿ ಜೊತೆಗೂಡಿದ ನಾಯಕ ಧೋನಿ ಗೆಲುವಿನ ಔಪಚಾರಿಕತೆಯನ್ನು ಮುಗಸಿದರು.

ಲಂಕಾ ಪರ ಕುಲಶೇಖರ 2 ವಿಕೆಟ್ ಮತ್ತು ಶನಕಾ, ಹೆರಾತ್ ಮತ್ತು ಪರೆರಾ ತಲಾ ಒಂದು ವಿಕೆಟ್ ಗಳಿಸಿದರು. ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com