ಸಿಎಂ V/s ಐಎಎಸ್ ಪಂದ್ಯ: ಅಖಿಲೇಶ್ ಯಾದವ್ 'ಮ್ಯಾನ್ ಆಫ್ ದಿ ಮ್ಯಾಚ್'

ಲಖೌನ್ ನಲ್ಲಿ ಭಾನುವಾರ ನಡೆದ ಸಿಎಂ XI ಹಾಗೂ ಯುಪಿ ಐಎಎಸ್ ಅಧಿಕಾರಿಗಳ ಸಂಘ XI ನಡುವೆ ನಡೆದ ಟಿ20...
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Updated on
ಲಖನೌ: ಲಖೌನ್ ನಲ್ಲಿ ಭಾನುವಾರ ನಡೆದ ಸಿಎಂ XI ಹಾಗೂ ಯುಪಿ ಐಎಎಸ್ ಅಧಿಕಾರಿಗಳ ಸಂಘ XI ನಡುವೆ ನಡೆದ ಟಿ20 ಪಂದ್ಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಲಾಗಿದೆ.
ಐಎಎಸ್ ಅಧಿಕಾರಿಗಳ ವಾರ್ಷಕ ನಾಲ್ಕು ದಿನಗಳ ಸಭೆ 'ಐಎಎಸ್ ವೀಕ್' ಅಂಗವಾಗಿ ಭಾನುವಾರ ಲಾ ಮಾರ್ಟಿನಿಯೆರಿ ಮೈದಾನದಲ್ಲಿ ಪ್ರೇಂಡ್ಲಿ ಪಂದ್ಯ ಯೋಜಿಸಲಾಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಅಖಿಲೇಶ್ ಯಾದವ್ ಅವರು, 11 ಬೌಂಡರಿ ಹಾಗೂ ಒಂದು ಸಿಕ್ಸ್ ಸೇರಿದಂತೆ 65 ರನ್ ಗಳಿಸಿದ್ದರು. ಅಖಿಲೇಶ್ ನೇತೃತ್ವದ ಸಿಎಂ ತಂಡ 20 ಓವರ್ ಗಳಲ್ಲಿ 127ರನ್ ಟಾರ್ಗೆಟ್ ನೀಡಿತ್ತು. 
127 ರನ್ ಗಳ ಗುರಿ ಬೆನ್ನತ್ತಿದ ಐಎಎಸ್ ಅಧಿಕಾರಿಗಳ ತಂಡ, ನಿಗದಿತ 20 ಓವರ್ ಗಳಲ್ಲಿ 126ರನ್ ಗಳಿಸುವ ಮೂಲಕ ಕೇವಲ ಒಂದೇ ಒಂದು ರನ್ ನಿಂದ ಸಿಎಂ ಎದುರು ಸೋಲು ಒಪ್ಪಿಕೊಂಡರು.
ವಿಧಾಸಭೆ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ಐಎಎಸ್ ಅಧಿಕಾರಿಗಳ ವಿರುದ್ಧ 1ರನ್ ನಿಂದ ಗೆಲುವು ಸಾಧಿಸಿದ ಸಿಎಂ ತಂಡಕ್ಕೆ ಪ್ರಶಸ್ತಿ ನೀಡಿದರು. ಅಲ್ಲದೆ ಸಿಎಂ ಅಖಿಲೇಶ್ ಯಾದವ್ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com