ಕುಸ್ತಿಪಟು ಸುಶೀಲ್ ಗಿಂತ ನರಸಿಂಗ್ ಉತ್ತಮ ಆಯ್ಕೆ: ಡಬ್ಲ್ಯುಎಫ್ಎ

ಮುಂದಿನ ರಿಯೋ ಒಲಿಂಪಿಕ್ಸ್ ನ 74 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸುಶೀಲ್ ಗಿಂತ ಅನುಭವಿ ನರಸಿಂಗ್ ಪಂಚಮ್ ಯಾದವ್ ಉತ್ತಮ ಆಯ್ಕೆ ಎಂದು...
ನರಸಿಂಗ್ ಪಂಚಮ್ ಯಾದವ್
ನರಸಿಂಗ್ ಪಂಚಮ್ ಯಾದವ್
Updated on: 

ನವದೆಹಲಿ: ಮುಂದಿನ ರಿಯೋ ಒಲಿಂಪಿಕ್ಸ್ ನ 74 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸುಶೀಲ್ ಗಿಂತ ಅನುಭವಿ ನರಸಿಂಗ್ ಪಂಚಮ್ ಯಾದವ್ ಉತ್ತಮ ಆಯ್ಕೆ ಎಂದು ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಎ) ಹೇಳಿದೆ.

2015ರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಆರ್ಹತೆ ಸಂಪಾದಿಸಿರುವ ನರಸಿಂಗ್ ಯಾವದ್ 74 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಗೆ ಸಲ್ಲುವ ಕುಸ್ತಿ ಪಟು ಆಗಿದ್ದಾರೆ. ಸುಶೀಲ್ ಸತತವಾಗಿ ಆಯ್ಕೆ ಟ್ರಯಲ್ಸ್ ನಲ್ಲಿ ನರಸಿಂಗ್ ವಿರುದ್ಧ ಸ್ಪರ್ಧೆ ಮಾಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಡಬ್ಲ್ಯುಎಫ್ಎ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.

ಈ ವಿಭಾಗದಲ್ಲಿ ಸುಶೀಲ್ ಗಿಂತ ಅನುಭವಿಯಾಗಿರುವ ನರಸಿಂಗ್ ಸೂಕ್ತ ಸ್ಪರ್ಧಿ ಅವರ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಲಾಗಿದೆ ಎಂದು ಡಬ್ಲ್ಯುಎಫ್ಎ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com