ಕೊಹ್ಲಿಗೆ ನಾಯಕತ್ವ ನೀಡಲು ಸರಿಯಾದ ಸಮಯ: ರವಿಶಾಸ್ತ್ರಿ

ಐಪಿಎಲ್ ಸೀಸನ್-9 ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ತಲುಪುತ್ತಿದ್ದಂತೆಯೇ ಕೊಹ್ಲಿಗೆ ಟೀಂ ಇಂಡಿಯಾದ ನಾಯಕತ್ವ ಜವಾಬ್ದಾರಿ ನೀಡುವ ಚರ್ಚೆಗಳು ಗರಿಗೆದರಿವೆ.
ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)

ನವದೆಹಲಿ: ಐಪಿಎಲ್ ಸೀಸನ್-9 ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ತಲುಪುತ್ತಿದ್ದಂತೆಯೇ ಕೊಹ್ಲಿಗೆ ಟೀಂ ಇಂಡಿಯಾದ ನಾಯಕತ್ವ  ಜವಾಬ್ದಾರಿ ನೀಡುವ ಚರ್ಚೆಗಳು ಗರಿಗೆದರಿವೆ.

ಮೊದಲಿನಿಂದಲೂ ವಿರಾಟ್ ಕೊಹ್ಲಿಗೆ ಪಟ್ಟ ಕಟ್ಟಬೇಕು ಎಂದು ಹೇಳುತ್ತಿದ್ದ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರ ಮಾತಿಗೆ ಪ್ರಸ್ತಕ್ತ ಸಾಲಿನ ಐಪಿಎಲ್ ಮತ್ತಷ್ಟು ಬಲ ನೀಡಿದ್ದು,  ಪ್ರಸ್ತುತ ವಿರಾಟ್ ಕೊಹ್ಲಿಗೆ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವ ನೀಡಲು ಸರಿಯಾದ ಸಮಯ ಎಂದು ಹೇಳಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ  ಮಾತನಾಡಿದ ರವಿಶಾಸ್ತ್ರಿ, "ಟೆಸ್ಟ್ ಕ್ರಿಕೆಟ್ ನಾಯಕರಾಗಿರುವ ವಿರಾಟ್​ ಕೊಹ್ಲಿಗೆ ಟಿ20 ಹಾಗೂ ಏಕದಿನ ತಂಡದ ನಾಯಕತ್ವ ನೀಡುವುದು ಸೂಕ್ತವಾಗಿದ್ದು, ಈಗಾಗಲೇ ವಿರಾಟ್ ಸಾಕಷ್ಟು  ಅನುಭವ ಪಡೆದಿದ್ದಾರೆ ಎಂದು ಹೇಳಿದ್ದಾರೆ.

"ನಾನೇನಾದರು ಆಯ್ಕೆ ಸಮಿತಿಯ ಮುಖ್ಯಸ್ಥನಾದರೆ ತಂಡದ ಭವಿಷ್ಯದ ದೃಷ್ಟಿಯಿಂದ ವಿರಾಟ್ ಕೊಹ್ಲಿಯನ್ನು ತಂಡದ ನಾಯಕನಾಗಿ ಮಾಡುವ ತಿರ್ಮಾನ ಕೈಗೊಳ್ಳುತ್ತೇನೆ. 2019ರ ಏಕದಿನ  ವಿಶ್ವಕಪ್​ಗೆ ಭದ್ರವಾದ ತಂಡ ಕಟ್ಟುವ ಅಗತ್ಯತೆ ಇದ್ದು, ಅದಕ್ಕೆ ಪೂರ್ವಭಾವಿಯಾಗಿ ಈಗಿನಿಂದಲೇ ತಂಡದಲ್ಲಿ ಬದಲಾವಣೆ ಅಗತ್ಯವಾಗಿದೆ. ವಿರಾಟ್​ ಕೊಹ್ಲಿಗೆ ಮೂರು ಮಾದರಿಗಳಲ್ಲಿ  ನಾಯಕನ ಜವಬ್ದಾರಿ ನೀಡುವುದು ಸೂಕ್ತ ಎಂದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಅಂತೆಯೇ "ಪ್ರಸ್ತುತ ಟಿ20 ಹಾಗೂ ಏಕದಿನ ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ತಂಡದ ಆಟಗಾರರಾಗಿ ಮುಂದುವರೆಯಬೇಕು. ಟೀಂ ಇಂಡಿಯಾಕ್ಕೆ ಧೋನಿ ಕೊಡುಗೆ  ಅಪಾರವಾಗಿದ್ದು, ಅವರು ತಮ್ಮ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನ ನೀಡಬೇಕು. ವಿಶ್ವಕಪ್ ಮತ್ತು ಭಾರತೀಯ ಕ್ರಿಕೆಟ್ ನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಠಿಣ ನಿರ್ಧಾರ ಕೈಗೊಳ್ಳುವ  ಅವಶ್ಯಕತೆ ಇದ್ದು, ನಾವು ಆಸ್ಟ್ರೇಲಿಯಾ ಮಾದರಿಯಲ್ಲಿ ನಿರ್ಣಯ ಕೈಗೊಳ್ಳಬೇಕಾದ ಅಗತ್ಯತೆ ಇದೆ. ಮಾರ್ಕ್ ​ಟೇಲರ್ ಅತ್ಯುತ್ತಮ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಸ್ವೀವಾ ಅವರಿಗೆ  ನಾಯಕತ್ವ ಪಟ್ಟ ಕಟ್ಟಲಾಯಿತು. ಅದೇ ರೀತಿ ರಿಕಿ ಪಾಂಟಿಂಗ್, ಕ್ಲಾರ್ಕ್ ಅವರು ತಂಡ ಯಶಸ್ಸಿನ ಉತ್ತುಂಗದಲ್ಲಿದ್ದಾಗ ನಾಯಕತ್ವ ತ್ಯಜಿಸಿದರು ಎಂದು ಪರೋಕ್ಷವಾಗಿ ರವಿ ಶಾಸ್ತ್ರಿ ಅವರು  ಧೋನಿ ಅವರಿಗೆ ಪರೋಕ್ಷವಾಗಿ ನಾಯಕತ್ವ ತ್ಯಜಿಸುವಂತೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com