ಪಿವಿ ಸಿಂಧು ಚೀನಾ ಓಪನ್ ಟೂರ್ನಿ ಚಾಂಪಿಯನ್

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಪಿವಿ ಸಿಂಧು ಚೀನಾ ಓಪನ್ ಟೂರ್ನಿ ಚಾಂಪಿಯನ್
ಪಿವಿ ಸಿಂಧು ಚೀನಾ ಓಪನ್ ಟೂರ್ನಿ ಚಾಂಪಿಯನ್
Updated on: 
ನವದೆಹಲಿ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. 
ಫೈನಲ್ ಪಂದ್ಯದಲ್ಲಿ ಚೀನಾದ ಸೂನ್ ಯು ಅವರನ್ನು 21-11, 17-21, 21-11 ಸೆಟ್ ಗಳ ಅಂತರದಿಂದ ಮಣಿಸಿದ್ದು ಚೀನಾ ಓಪನ್ ಟೂರ್ನಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  ಕೇವಲ 17 ನಿಮಿಷಗಳಲ್ಲಿ ಮೊದಲ ಪಂದ್ಯವನ್ನು(ಸೆಟ್) 21-11 ರ ಅಂತರದಲ್ಲಿ ಮುಕ್ತಾಯಗೊಳಿಸಿದ ಸಿಂಧು, ಎರಡನೇ ಸೆಟ್ ನಲ್ಲಿ 14-10 ಅಂತರವನ್ನು ಕಾಯ್ದುಕೊಂಡರು. ನಂತರದ ಸೆಟ್ ಗಳಲ್ಲಿ ಸತತ 6 ಪಾಯಿಂಟ್ ಗಳನ್ನು ಪಡೆಯುವ ಮೂಲಕ  ಚೀನಾದ ಸೂನ್ ಯು ಸಮಬಲ ಸಾಧಿಸಿದರಾದರೂ, ಧೃತಿಗೆಡದ ಪಿವಿ ಸಿಂಧು ನಿರ್ಣಾಯಕ ಪಂದ್ಯದದಲ್ಲಿ 21-11 ಅಂತರ ಸಾಧಿಸುವ ಮೂಲಕ ಚೀನಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 
ಹೈದರಾಬಾದ್ ನ ಆಟಗಾರ್ತಿ ಸಿಂಧು ತಮ್ಮ ವೃತ್ತಿಜೀವನದ ಮೊಟ್ಟ ಮೊದಲ ಸೂಪರ್ ಸೀರಿಸ್ ಪ್ರೀಮಿಯರ್ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com