ಪಾಕ್ ನಲ್ಲಿ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದ ಭಾರತ

ಸಾರ್ಕ್ ಶೃಂಗಸಭೆಯಿಂದ ಭಾರತ ಹಿಂದೆ ಸರಿದ ಬೆನ್ನಲ್ಲೇ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನಕ್ಕೆ ಮತ್ತೆ ಅಂತಹುದೇ ಪರಿಸ್ಥಿತಿ ಎದುರಾಗಿದ್ದು, ಇಸ್ಲಾಮಾಬಾದ್ ನಲ್ಲಿ ಆಯೋಜನೆಯಾಗಿದ್ದ ಬ್ಯಾಡ್ಮಿಂಟನ್ ಸರಣಿಯಿಂದಲೂ ಭಾರತ ಹಿಂದೆ ಸರಿದಿದೆ.
ಭಾರತ ಬ್ಯಾಡ್ಮಿಂಟನ್ (ಸಂಗ್ರಹ ಚಿತ್ರ)
ಭಾರತ ಬ್ಯಾಡ್ಮಿಂಟನ್ (ಸಂಗ್ರಹ ಚಿತ್ರ)

ನವದೆಹಲಿ: ಸಾರ್ಕ್ ಶೃಂಗಸಭೆಯಿಂದ ಭಾರತ ಹಿಂದೆ ಸರಿದ ಬೆನ್ನಲ್ಲೇ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನಕ್ಕೆ ಮತ್ತೆ ಅಂತಹುದೇ ಪರಿಸ್ಥಿತಿ ಎದುರಾಗಿದ್ದು, ಇಸ್ಲಾಮಾಬಾದ್ ನಲ್ಲಿ  ಆಯೋಜನೆಯಾಗಿದ್ದ ಬ್ಯಾಡ್ಮಿಂಟನ್ ಸರಣಿಯಿಂದಲೂ ಭಾರತ ಹಿಂದೆ ಸರಿದಿದೆ.

ಉರಿ ಉಗ್ರ ದಾಳಿಯ ಬಳಿಕ ಆದ ಬೆಳವಣಿಗೆಗಳಿಂದ ಕಠಿಣ ನಿಲುವು ತೆಳೆದಿರುವ ಭಾರತ ಬ್ಯಾಡ್ಮಿಂಟನ್‌ ಫೆಡರೇಷನ್‌ ಈ ತಿಂಗಳಾಂತ್ಯದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ  ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಭಾರತದ ಸ್ಪರ್ಧಿಗಳನ್ನು ಕಳುಹಿಸದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದೇ ಅಕ್ಟೋಬರ್ 18ರಿಂದ 21ರ ವರೆಗೆ ಪಾಕಿಸ್ತಾನದಲ್ಲಿ  ಬಿಡಬ್ಲ್ಯುಎಫ್‌ ಅಂತಾರಾಷ್ಟ್ರೀಯ ಟೂರ್ನಿ ಆಯೋಜನೆಯಾಗಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರತದ ಸ್ಪರ್ಧಿಗಳನ್ನು  ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ಬ್ಯಾಡ್ಮಿಂಟನ್ ಫೆಡರೇಷನ್ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಅವರು, "ಉಭಯ ದೇಶಗಳ ನಡುವಣ ಬಾಂಧವ್ಯ ಹದಗೆಟ್ಟಿರುವ  ಕಾರಣ ಭಾರತದ ಸ್ಪರ್ಧಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ" ಎಂದು ಹೇಳಿದ್ದಾರೆ.

ಶುಕ್ರವಾರವಷ್ಟೇ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಪಾಕ್‌ ವಿರುದ್ಧ ಯಾವುದೇ ಅಂತರರಾಷ್ಟ್ರೀಯ ಸರಣಿ ಯನ್ನು ಆಡದಿರಲು ನಿರ್ಧರಿಸಿದ್ದರು. ಅಲ್ಲದೆ ಮುಂಬರುವ  ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಒಂದೇ ಗುಂಪಿನಲ್ಲಿ ಅವಕಾಶ ಕೊಡಬಾರದು ಎಂದೂ ಐಸಿಸಿಗೆ ಮನವಿ ಮಾಡಿದ್ದರು. ಅಲ್ಲದೆ ಇನ್ನು "ಪಾಕ್‌ ಜೊತೆ  ಕ್ರಿಕೆಟ್‌ ಸರಣಿ ಕನಸಿನ ಮಾತು" ಎಂದು ಅನುರಾಗ್ ಠಾಕೂರ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com