

ಬೆಂಗಳೂರು: ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗೆ ಭಾರತ ತಂಡದ ಕೋಚ್ ಆಗಿ ಕನ್ನಡ ಸಿನಿಮಾ ನಟ ಮಾಜಿ ದೇಹದಾರ್ಢ್ಯ ಪಟು ಕನ್ನಡಿಗ ಎವಿ ರವಿ ಆಕೆ ಮಾಡಿದ್ದಾರೆ.
ಸೆಪ್ಟೆಂಬರ್ 30 ರಿಂದ ಫಿಲಿಪ್ಪೀನ್ಸ್ ನಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದ್ದು, ಭಾರತ ತಂಡದ ಕೋಚ್ ಆಗಿ ರವಿ ಅವರನ್ನು ಇಂಡಿಯನ್ ಫಿಟ್ನೆಸ್ ಮತ್ತು ದೇಹದಾರ್ಢ್ಯ ಒಕ್ಕೂಟ ಆಯ್ಕೆ ಮಾಡಿದೆ.
ಮೂಲತಃ ಕೋಲಾರದವರಾದ ರವಿ ಮಾಜಿ ಮಿಸ್ಟರ್ ಇಂಡಿಯಾ ಕೂಡ ಆಗಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲೂ ಭಾರತ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.