ಭಾರತ ಮಹಿಳಾ ಹಾಕಿ ತಂಡ
ಕ್ರೀಡೆ
ಹಾಕಿ ವಿಶ್ವ ಲೀಗ್ 2ನೇ ಸುತ್ತು: ಫೈನಲ್‌ಗೆ ಭಾರತ ಮಹಿಳಾ ತಂಡ
ಭಾರತದ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಹಾಕಿ ವಿಶ್ವ ಲೀಗ್ ನ 2ನೇ ಸುತ್ತಿನ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ...
ವೆಸ್ಟ್ ವಾಂಕೋವರ್(ಕೆನಡಾ): ಭಾರತದ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಹಾಕಿ ವಿಶ್ವ ಲೀಗ್ ನ 2ನೇ ಸುತ್ತಿನ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 4-0 ಗೋಲುಗಳಿಂದ ಬೆಲಾರಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಫೈನಲ್ ಪಂದ್ಯದಲ್ಲಿ ಚಿಲಿ ತಂಡವನ್ನು ಎದುರಿಸಲಿದೆ.
ಇನ್ನು ಫೈನಲ್ ಪ್ರವೇಶಿಸುವ ಮೂಲಕ ಭಾರತ ಜೂನ್-ಜುಲೈನಲ್ಲಿ ನಡೆಯಲಿರುವ ಹಾಕಿ ವಿಶ್ವ ಲೀಗ್ ನ ಮಹತ್ವದ ಸೆಮಿಫೈನಲ್ಸ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದು ಈ ಟೂರ್ನಿ 2018ರ ವಿಶ್ವಕಪ್ ಟೂರ್ನಿಗೆ ಅರ್ಹತಾ ಘಟ್ಟವಾಗಿರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ