ಭಾರತ 20 ವರ್ಷ ಹಿಂದಿದೆ, ಒರಟು ದೇಶ ಹೇಳಿಕೆಗೆ ಕ್ಷಮೆಯಾಚಿಸಿದ ಅಮೆರಿಕದ ಎನ್‌ಬಿಎ ಆಟಗಾರ

ಭಾರತ ಜ್ಞಾನದಲ್ಲಿ 20 ವರ್ಷ ಹಿಂದಿದೆ, ಭಾರತ ಒರಟು ದೇಶ ಎಂದು ಟೀಕೆ ಮಾಡಿದ್ದ ಅಮೆರಿಕದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೆವಿನ್ ಡ್ಯುರಾಂಟ್ ಇದೀಗ ಭಾರತದ ಕ್ಷಮೆ ಕೋರಿದ್ದಾರೆ...
ಕೇವಿನ್ ಡ್ಯುರಾಂಟ್
ಕೇವಿನ್ ಡ್ಯುರಾಂಟ್
ನವದೆಹಲಿ: ಭಾರತ ಜ್ಞಾನದಲ್ಲಿ 20 ವರ್ಷ ಹಿಂದಿದೆ, ಭಾರತ ಒರಟು ದೇಶ ಎಂದು ಟೀಕೆ ಮಾಡಿದ್ದ ಅಮೆರಿಕದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೆವಿನ್ ಡ್ಯುರಾಂಟ್ ಇದೀಗ ಭಾರತದ ಕ್ಷಮೆ ಕೋರಿದ್ದಾರೆ. 
ಭಾರತದಲ್ಲಿ ಇನ್ನು ಬಡತನ, ಗಲೀಜು, ಮೂಲಸೌಕರ್ಯದ ಕೊರತೆ ತುಂಬಿಕೊಂಡಿದೆ ಎಂದು ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಕೆವಿನ್ ಡ್ಯುರಾಂಟ್ ವೆಬ್ ಸೈಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತವನ್ನು ಟೀಕಿಸಿದ್ದರು. 
ಕೆವಿನ್ ಡ್ಯುರಾಂಟ್ ಹೇಳಿಕೆ ಕುರಿತು ಭಾರೀ ವಿರೋಧ ವ್ಯಕ್ತವಾಗಿತ್ತು. ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ. ಭಾರತ ಕುರಿತು ನನ್ನ ಹೇಳಿಕೆಗೆ ಕ್ಷಮೆ ಕೇಳುತ್ತಿದ್ದೇನೆ. ಭಾರತದಲ್ಲಿ ಕಳೆದ ಕ್ಷಣಗಳು ಅದ್ಭುತವಾಗಿದ್ದವು. ನನ್ನ ಹೇಳಿಕೆ ಬಗ್ಗೆ ನನಗೆ ಬಹಳ ಬೇಸರ ಉಂಟು ಮಾಡಿದೆ. ನನ್ನ ತಪ್ಪನ್ನು ಮನ್ನಿಸಿ. ನಾನು ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದು ಟ್ವೀಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com