ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌: ಬೆಳ್ಳಿಗೆ ತೃಪ್ತರಾದ ಪಿವಿ ಸಿಂಧೂ

ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ ಸೋಲು ಕಂಡಿದ್ದು, ಜಪಾನಿನ ನೊಝೊಮಿ ಒಕುಹರ ವಿರುದ್ಧ ಸೋಲನುಭವಿಸುವ ಮೂಲಕ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಗ್ಲಾಸ್ಗೊ: ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ ಸೋಲು ಕಂಡಿದ್ದು, ಜಪಾನಿನ ನೊಝೊಮಿ ಒಕುಹರ ವಿರುದ್ಧ ಸೋಲನುಭವಿಸುವ ಮೂಲಕ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಗ್ಲಾಸ್ಕೋದಲ್ಲಿ ನಡೆದ ಫೈನಲ್ ದಲ್ಲಿ ಒಕುಹರ ವಿರುದ್ಧದ ಪಂದ್ಯದಲ್ಲಿ ಸಿಂಧು ಅವರು 19-21, 22-20, 20-22 ಸೆಟ್‌ಗಳಿಂದ ವಿರೋಚಿತ ಸೋಲುಕಂಡರು. ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದರೂ 2ನೇ ಸೆಟ್ ನಲ್ಲಿ ತಿರುಗೇಟು ನೀಡಿದ್ದ ಸಿಂಧೂ ಅಂತಿಮ ಹಾಗೂ ನಿರ್ಣಾಯಕ 
ಘಟದಲ್ಲಿ 20-22 ಸೆಟ್ ಗಳಿಂದ ಸೋಲನ್ನು ಅನುಭವಿಸಿದರು.  ಇದಕ್ಕೂ ಮುನ್ನ, ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯುಫಿ ವಿರುದ್ಧ 48 ನಿಮಿಷಗಳಲ್ಲಿ 21-13, 21-10 ಸೆಟ್‌ಗಳಿಂದ ಸಿಂಧು ಜಯಗಳಿಸಿದ್ದರು. ಸಿಂಧು ಅವರು 2013 ಮತ್ತು 2014ರ ವಿಶ್ವ ಬ್ಯಾಡ್ಮಿಂಟನ್ 
ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com