35 ವರ್ಷದ ಸೆರೆನಾ ಅವರು 22 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಸ್ಟೆಫಿ ಗ್ರಾಫ್ ಅವರ ದಾಖಲೆಯನ್ನು ಈಗಾಗಲೇ ಸರಿಗಟ್ಟಿದ್ದಾರೆ. 23ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಸೆರೆನಾ ಕಳೆದ ವರ್ಷದ ಫೈನಲ್‌ನಲ್ಲಿ ಏಂಜಲಿಕಾ ಕೆರ್ಬರ್ ವಿರುದ್ಧ ಸೋತಿದ್ದರು. ಈ ಬಾರಿ ತಮ್ಮ ಸಹೋದರಿಯ ವಿರುದ್ಧ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.