ರೋಜರ್ ಫೆಡರರ್ ಮುಡಿಗೆ ಆಸ್ಟ್ರೇಲಿಯನ್ ಓಪನ್ ಗರಿ!

ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪ್ರಶಸ್ತಿಗೆದ್ದ ರೋಜರ್ ಫೆಡರರ್
ಪ್ರಶಸ್ತಿಗೆದ್ದ ರೋಜರ್ ಫೆಡರರ್

ಮೆಲ್ಬೋರ್ನ್: ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸ್ಪೈನ್ ನ ಬಲಿಷ್ಠ ರಾಫೆಲ್ ನಡಾಲ್ ಅವರನ್ನು ಮಣಿಸುವ ಮೂಲಕ ತಮ್ಮ 18ನೇ ಗ್ರಾಂಡ್ ಸ್ಲ್ಯಾಮ್  ಅನ್ನು ಮುಡಿಗೇರಿಸಿಕೊಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಫೆಡರರ್ -ನಡಾಲ್ ರನ್ನು 6-4, 3-6, 6-1, 3-6, 6-3 ನೇರ ಸೆಟ್ ಗಳ ಅಂತರದಿಂದ ಮಣಿಸಿ ವಿಜಯ ಮಾಲೆ ಧರಿಸಿದ್ದಾರೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ 5 ಸೆಟ್ ಗಳ ವರೆಗೆ ನಡೆದಿತ್ತು. ಎರಡನೇ ಸೆಟ್ ನಲ್ಲಿ ಹಿನ್ನಡೆ ಕಂಡಿದ್ದ ಫೆಡರರ್ ಬಳಿಕ ನಡಾಲ್ ವಿರುದ್ಧ ತಿರುಗಿಬಿದ್ದು ಮೂರನೇ ಸೆಟ್ ಅನ್ನು ಬರೊಬ್ಬರಿ 6-1 ಅಂತರದಲ್ಲಿ  ಜಯಿಸಿದರು. ಬಳಿಕ ನಾಲ್ಕನೇ ಸೆಟ್ ನಲ್ಲಿ ಫೆಡರರ್ ವಿರುದ್ಧ ತಿರುಗಿಬಿದ್ದ ನಡಾಲ್ ಆ ಸೆಟ್ ಅನ್ನು 6-3ರಿಂದ ವಶಪಡಿಸಿಕೊಂಡರು. ಆದರೆ ನಿರ್ಣಾಯಕ ಹಂತದಲ್ಲಿ ಮೇಲುಗೈ ಸಾಧಿಸಿದ ಫೆಡರರ್ ಐದು ಮತ್ತು ಅಂತಿಮ ಸೆಟ್ ನಲ್ಲಿ  6-3ರಿಂದ ಭರ್ಜರಿ ಜಯ ಸಾಧಿಸಿದರು.

ಆ ಮೂಲಕ ತಮ್ಮ 18ನೇ ಗ್ರ್ಯಾಂಡ್ ಸ್ಲಾಮ್ ಅನ್ನು ಫೆಡರರ್ ಮುಡಿಗೇರಿಸಿಕೊಂಡರು. ಅಲ್ಲದೆ 5ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡ ಕೀರ್ತಿಗೆ ಫೆಡರರ್ ಭಾಜನರಾದರು.

ಆಸ್ಟ್ರೇಲಿಯನ್ ಓಪನ್ ನಲ್ಲಿ 8 ವರ್ಷಗಳ ಬಳಿಕ ಮದಗಜಗಳ ಸೆಣಸಾಟ

ಟೆನ್ನಿಸ್ ರಂಗದಲ್ಲೇ ಫೆಡರರ್ ಮತ್ತು ನಡಾಲ್ ಅತ್ಯಂತ ಪ್ರಬಲ ಆಟಗಾರರು. ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ಇತಿಹಾಸದಲ್ಲಿ ಎಂಟು ವರ್ಷಗಳ ಬಳಿಕ ಸೆಣಸಾಟಕ್ಕಿಳಿದಿದ್ದ ಇಬ್ಬರೂ ಶ್ರೇಷ್ಠ ಆಟಗಾರರ ಪ್ರದರ್ಶನ  ಸಾಕಷ್ಟು ಕುತೂಹಲ ಮೂಡಿಸಿತ್ತು. ಐದನೇ ಸೆಟ್​ನಲ್ಲಿ ಟ್ರೋಫಿ ಎತ್ತು ಹಿಡಿಯಲಿಕ್ಕಾಗಿ ಭಾರಿ ಕಾದಾಟವೇ ನಡೆಯಿತು. ಅಂತಿಮವಾಗಿ ರೋಜರ್ ಫೆಡರರ್ ಅತ್ಯುತ್ತಮ ಸರ್ವ್ ಮೂಲಕ ಜಯ ಸಾಧಿಸಿ ಪ್ರಶಸ್ತಿ ಸಂಭ್ರಮ  ಅನುಭವಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com