ಪ್ರೊ ಕಬ್ಬಡ್ಡಿ ಲೀಗ್ ಚಾಂಪಿಯನ್ ತಂಡದ ಬಹುಮಾನದ ಮೊತ್ತ 3 ಕೋಟಿಗೆ ಏರಿಕೆ!

ಇದೇ ಜುಲೈ 28 ರಿಂದ ಹೈದರಾಬಾದ್​ನಲ್ಲಿ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದ್ದು, ಚಾಂಪಿಯನ್ ತಂಡ ಒಟ್ಟು ಮೂರು ಕೋಟಿ ರುಗಳ ಬಹುಮಾನದ ಮೊತ್ತ ಪಡೆಯಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಇದೇ ಜುಲೈ 28 ರಿಂದ ಹೈದರಾಬಾದ್​ನಲ್ಲಿ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದ್ದು, ಚಾಂಪಿಯನ್ ತಂಡ ಒಟ್ಟು ಮೂರು ಕೋಟಿ ರುಗಳ ಬಹುಮಾನದ  ಮೊತ್ತ ಪಡೆಯಲಿದೆ ಎಂದು ತಿಳಿದುಬಂದಿದೆ.

ಬಹು ನಿರೀಕ್ಷಿತ ಐದನೇ ಆವೃತ್ತಿಯ ಪ್ರೋ ಕಬ್ಬಡ್ಡಿ ಲೀಗ್ ಪಂದ್ಯಾವಳಿಯ ಒಟ್ಟಾರೆ ಬಹುಮಾನದ ಮೊತ್ತವನ್ನು ಒಟ್ಟು 8 ಕೋಟಿ ರುಗಳಿಗೆ ಏರಿಕೆ ಮಾಡಲಾಗಿದ್ದು, ರನ್ನರ್ ಅಪ್ ತಂಡ 1.8 ಕೋಟಿ ರು.ಗಳ ಬಹುಮಾನದ ಮೊತ್ತ  ಪಡೆಯಲಿದೆ.

ಈ ಹಿಂದಿನ ಅಂದಕೆ ನಾಲ್ಕನೇ ಆವೃತ್ತಿಯವರೆಗೂ ಚಾಂಪಿಯನ್ ತಂಡಗಳು 1 ಕೋಟಿ ರು. ಬಹುಮಾನ ಮೊತ್ತ ಪಡೆದುಕೊಳ್ಳುತ್ತಿದ್ದವು. ಆದರೆ ಲೀಗ್ ಜನಪ್ರಿಯತೆ ಹೆಚ್ಚಿದಂತೆಯೇ ಪ್ರಾಯೋಜಕರ ಸಂಖ್ಯೆ ಕೂಡ ದುಪ್ಪಟ್ಟಾಗಿದ್ದು,  ಇದೇ ಕಾರಣಕ್ಕಾಗಿ ಬಹುಮಾನದ ಮೊತ್ತದಲ್ಲಿ ಈ ಬಾರಿ 2 ಕೋಟಿ ರು. ಹೆಚ್ಚಿಸಲಾಗಿದೆ. ಅದರನ್ವಯ ಚಾಂಪಿಯನ್ ತಂಡ ಬರೋಬ್ಬರಿ 3 ಕೋಟಿ ರು. ಬಹುಮಾನ ಪಡೆದುಕೊಳ್ಳಲಿದೆ. ಒಟ್ಟು 12 ತಂಡಗಳ ಮುಖಾಮುಖಿಯ 5ನೇ  ಆವೃತ್ತಿಯ ಪಿಕೆಎಲ್​ನಲ್ಲಿ 138 ಪಂದ್ಯಗಳು ನಡೆಯಲಿವೆ. ರನ್ನರ್ ​ಅಪ್ ತಂಡ 1.8 ಕೋಟಿ ರು. ಪಡೆಯಲಿದ್ದು, ಮೂರನೇ ಸ್ಥಾನ ಪಡೆದ ತಂಡ 1.2 ಕೋಟಿ ರು. ಪಡೆಯಲಿದೆ.

ಇನ್ನು ಟೂರ್ನಿಯ ಮೌಲ್ಯಯುತ ಆಟಗಾರನಿಗೆ 15 ಲಕ್ಷ ರು. ಬಹುಮಾನ ಮೀಸಲಿರಿಸಲಾಗಿದ್ದು, ಬೆಸ್ಟ್ ರೈಡರ್ ಹಾಗೂ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆವ ಆಟಗಾರನಿಗೆ ತಲಾ 10 ಲಕ್ಷ ನೀಡಲು ನಿರ್ಧರಿಸಲಾಗಿದೆ.

ನಾಲ್ಕನೇ ಆವೃತ್ತಿಯ ಪಿಕೆಎಲ್ ಯಶಸ್ಸಿನ ಬೆನ್ನಲ್ಲೇ ಆರಂಭವಾಗುತ್ತಿರುವ ಐದನೇ ಆವೃತ್ತಿಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಆಯೋಜಕರು  ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ಐದನೇ ಆವೃತ್ತಿಯ ಲೀಗ್ ಆರಂಭಕ್ಕೂ ಮುನ್ನವೇ, ಹಲವು ದಾಖಲೆಗಳನ್ನು ಮಾಡಲು ನಿರ್ಮಿಸುತ್ತಿದೆ.

ಮೊದಲು ಶೀರ್ಷಿಕೆ ಪ್ರಾಯೋಜಕತ್ವ ಬಳಿಕ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ಮಾಡಿದ್ದ ಪಿಕೆಎಲ್​ನಲ್ಲಿ ಈಗ ಬಹುಮಾನ ಮೊತ್ತದಲ್ಲಿ ಭರ್ಜರಿ ಏರಿಕೆ ಮಾಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಒಟ್ಟಾರೆ  13 ತಂಡಗಳ ಹೈವೋಲ್ಟೇಜ್ ಪಿಕೆಎಲ್​ಗೆ ಸಂಪೂರ್ಣ ಸನ್ನದ್ಧರಾಗಿದ್ದೇವೆ’ ಎಂದು ಲೀಗ್ ಕಮೀಷನರ್ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.

ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ತಂಡಗಳ ಮುಖಾಮುಖಿಯೊಂದಿಗೆ ಜುಲೈ 28 ರಂದು ಹೈದರಾಬಾದ್​ನಲ್ಲಿ ಪಿಕೆಎಲ್​ಗೆ ಚಾಲನೆ ಸಿಗಲಿದೆ.

ಪಿಕೆಎಲ್ ಬಹುಮಾನ ಮೊತ್ತದ ವಿವರ ಈ ಕೆಳಗಿನಂತಿವೆ.
1. ಚಾಂಪಿಯನ್ 3 ಕೋಟಿ
2. ರನ್ನರ್​ಅಪ್ 1.80ಕೋಟಿ
3. 3ನೇ ಸ್ಥಾನ 1.20 ಕೋಟಿ
4. ನಾಲ್ಕನೇ ಸ್ಥಾನ 80 ಲಕ್ಷ
5. 5ನೇ ಸ್ಥಾನ 35 ಲಕ್ಷ
6. 6ನೇ ಸ್ಥಾನ 35 ಲಕ್ಷ
7. ವೈಯಕ್ತಿಕ ಪ್ರಶಸ್ತಿ ಮೊತ್ತ
8.  ಮೌಲ್ಯಯುತ ಆಟಗಾರ 15 ಲಕ್ಷ
9. ಬೆಸ್ಟ್ ರೈಡರ್ 10 ಲಕ್ಷ
10. ಬೆಸ್ಟ್ ಡಿಫೆಂಡರ್ 10 ಲಕ್ಷ
11. ಯುವ ಆಟಗಾರ 8 ಲಕ್ಷ
12. ಬೆಸ್ಟ್ ರೆಫ್ರಿ (ಪುರುಷರು) 3.5 ಲಕ್ಷ
13.ಬೆಸ್ಟ್ ರೆಫ್ರಿ (ಮಹಿಳೆಯರು) 3.5 ಲಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com