ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಹೊರಬಂದಿದ್ದು ಇದೀಗ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಹೊರಬಂದಿದ್ದಾರೆ.
ಚೀನಾದ ಸನ್ ಯು ವಿರುದ್ಧದ ಪಂದ್ಯದಲ್ಲಿ ಸೈನಾ ನೆಹ್ವಾಲ್ 17-21, 21-10, 17-21 ಸೆಟ್ ಗಳಿಂದ ಸೋತು ನಿರಾಸೆ ಮೂಡಿಸಿದರು. ಒಂದು ಗಂಟೆ 18 ನಿಮಿಷದ ಕಾಳಗದಲ್ಲಿ ಸೈನಾ ಸನ್ ಯುಗೆ ಶರಣಾಗಿದ್ದಾರೆ.