ನ್ಯೂಯಾರ್ಕ್: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತದ ಅಥ್ಲೀಟ್ ತನ್ವೀರ್ ಹುಸೇನ್ ನನ್ನು ಅಮೆರಕ ಪೊಲೀಸರು ಬಂಧಿಸಿದ್ದಾರೆ.
ಕಾಶ್ಮೀರ ಮೂಲದ 24 ವರ್ಷದ ತನ್ವೀರ್ ಹುಸೇನ್ ವಿಶ್ವ ಸ್ನೋ ಶೂ ರೇಸ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಇತ್ತೀಚೆಗಷ್ಟೆ ಅಮೆರಿಕಕ್ಕೆ ತೆರಳಿದ್ದರು. ಇದೀಗ ಅವರ ಮೇಲೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಂದಿದ್ದು ಈ ಸಂಬಂಧ ಪೊಲೀಸರು ತನ್ವೀರ್ ನನ್ನು ಬಂಧಿಸಿದ್ದಾರೆ.
ತನ್ವೀರ್ ಹುಸೇನ್ ಗೆ ಮೊದಲು ವೀಸಾ ನಿರಾಕರಿಸಲಾಗಿತ್ತು ಹಲವು ಪ್ರಮುಖರ ಮಧ್ಯ ಪ್ರವೇಶದ ಬಳಿಕ ಕಡೆಗೂ ಆತನಿಗೆ ವೀಸಾ ದೊರೆತಿತ್ತು. ಇದೀಗ ಬಂಧನಕ್ಕೊಳಗಾಗಿರುವ ಹುಸೇನ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಪ್ರಯತ್ನಗಳು ನಡೆದಿವೆ.