ಏರ್ ಇಂಡಿಗೋ ಸಿಬ್ಬಂದಿ ಅಸಭ್ಯ ವರ್ತನೆ: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬೇಸರ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಪ್ರತಿಷ್ಠಿತ ಏರ್ ಇಂಡಿಗೋ ಸಂಸ್ಧೆಯ ವಿರುದ್ಧ ಅಸಮಾಧಾನಗೊಂಡಿದ್ದಾರೆ...
ಪಿವಿ ಸಿಂಧು
ಪಿವಿ ಸಿಂಧು
ಮುಂಬೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ  ಪಿವಿ ಸಿಂಧು ಪ್ರತಿಷ್ಠಿತ ಏರ್ ಇಂಡಿಗೋ ಸಂಸ್ಧೆಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. 
ಏರ್ ಇಂಡಿಗೋ ಸಂಸ್ಥೆಯ ಸಿಬ್ಬಂದಿಯ ಅಸಭ್ಯ ವರ್ತನೆನಿಂದ ಬೇಸರಗೊಂಡಿರುವ ಪಿವಿ ಸಿಂಧು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. 
ನವೆಂಬರ್ 4ರಂದು ಹೈದರಾಬಾದ್ ನಿಂದ ಮುಂಬೈಗೆ 6ಇ 608 ವಿಮಾನದ ಮೂಲಕ ಪ್ರಯಾಣಿಸುವಾಗ ಅತೀ ಕೆಟ್ಟ ಅನುಭವವಾಯಿತು. ಸಂಸ್ಥೆಯ ಗ್ರೌಂಡ್ ಸ್ಟಾಫ್ ಅಜಿತೇಶ್ ಎಂಬಾತ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಟ್ವೀಟ್ ಮಾಡಿದ್ದಾರೆ. 
ಈ ವೇಳೆ ಗಗನಸಖಿ ಆಶೀಮಾ ಎಂಬುವರು ಅಜಿತೇಶ್ ಗೆ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ತಿಳಿ ಹೇಳಲು ಮುಂದಾದಾಗ ಅವರೊಂದಿಗೂ ಆತ ಒರಟಾಗಿ ನಡೆದುಕೊಂಡರು ಎಂದು ಸಿಂಧು ಟ್ವೀಟ್ ಮಾಡಿದ್ದು ಈ ರೀತಿಯ ಸಿಬ್ಬಂದಿ ಕಾರ್ಯನಿರ್ವಹಿಸಿದರೆ ಸಂಸ್ಥೆಯ ಪ್ರತಿಷ್ಠೆ ಕುಂದುತ್ತದೆ ಎಂದು ಇಂಡಿಗೋಗೆ ಛೀಮಾರಿ ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com