30 ವರ್ಷಗಳ ಅನುಭವದ ಹೊರತಾಗಿಯೂ, ನನಗೆ ಬ್ಯಾಡ್ಮಿಂಟನ್ ಬಗ್ಗೆ ಸಂಪೂರ್ಣ ತಿಳಿದಿಲ್ಲ: ಪಿ. ಗೋಪಿಚಂದ್

ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಪಡೆದಿದ್ದರೂ ಆ ಕ್ರೀಡೆಯ ಬಗ್ಗೆ ನನಗೆ ಇನ್ನೂ ಹೆಚ್ಚೇನೂ ಗೊತ್ತಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೆಲಾ ಗೋಪಿಚಂದ್ ಶನಿವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಪಡೆದಿದ್ದರೂ ಆ ಕ್ರೀಡೆಯ ಬಗ್ಗೆ ನನಗೆ ಇನ್ನೂ ಹೆಚ್ಚೇನೂ ಗೊತ್ತಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೆಲಾ ಗೋಪಿಚಂದ್ ಶನಿವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆರ್ಟ್ ಲಿವಿಂಗ್ ಸಂಸ್ಥೆ ಆಯೋಜಿಸಿದ್ದ ಗ್ಲೋಬಲ್ ಲೀಡರ್ ಶಿಪ್ ಫೋರಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಟಲ್ ಬ್ಯಾಡ್ಮಿಂಟನ್ ತಂಡದ ರಾಷ್ಟ್ರೀಯ ಕೋಚ್ ಪಿ ಗೋಪಿ ಚಂದ್ ಅವರು, "ನಾನು  ಬ್ಯಾಡ್ಮಿಂಟನ್‌ಗೆ ಪ್ರವೇಶಿಸಿದ ಸಂದರ್ಭದಲ್ಲಿ ಕ್ರಿಕೆಟ್ ಹಾಗೂ ಟೆನಿಸ್‌ ಗೆ ಪ್ರವೇಶವಿರಲಿಲ್ಲ. ಆಗ ಯಾರಿಗೂ ಬ್ಯಾಡ್ಮಿಂಟನ್‌ ನಲ್ಲಿ ಆಸಕ್ತಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬೇರೆ ದಾರಿಯಿಲ್ಲದೆ ನಾನು ಬ್ಯಾಡ್ಮಿಂಟನ್ ಕ್ರೀಡೆಯನ್ನು  ಆಯ್ಕೆ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ.
ಇದೇ ವೇಳೆ, "ನಾನು 2004ರಲ್ಲಿ ಕೋಚಿಂಗ್ ವೃತ್ತಿ ಆರಂಭಿಸಿದಾಗ ಕೋಚಿಂಗ್‌ ಗೆ ಬರುವ ಆಕಾಂಕ್ಷಿಗಳ ಶ್ರೇಷ್ಠತೆಯನ್ನು ಗುರುತಿಸಿ ಅವರನ್ನು ಮತ್ತಷ್ಟು ಉತ್ತಮಪಡಿಸಲು ಯತ್ನಿಸುತ್ತಿದ್ದೆ. ಆಗ ನನ್ನ ಮನದಲ್ಲಿ ಬ್ಯಾಡ್ಮಿಂಟನ್ ಬಗ್ಗೆ  ನನಗೆ ಎಲ್ಲ ಗೊತ್ತು ಎಂದು ತಿಳಿದಿದ್ದೆ. ಆದರೆ ಒಂದು ಬಾರಿ ಅಕಾಡೆಮಿ ಸೇರಿದ ಓರ್ವ ಪುಟ್ಟ ಹುಡುಗಿಯೊಂದು ನನ್ನ ಬಳಿ ಬಂದು ಶಟ್ಲಲ್‌ನ್ನು ಹಿಡಿದುಕೊಳ್ಳುವುದು ಹೇಗೆಂದು ಕೇಳಿತ್ತು. ಆ ಸಾಮಾನ್ಯ ಪ್ರಶ್ನೆಗೆ ನಾನು ತಬ್ಬಿಬ್ಬಾಗಿ  ಹೋಗಿದ್ದೆ. ನಮ್ಮ ಮಕ್ಕಳಿಗೆ ನೀಡುವ ಶಿಕ್ಷಣದ ವಿಚಾರದಲ್ಲಿ ನಾವು ಚೌಕಾಶಿ..ಮಾಡಬಾರದು. ಅವರನ್ನು ಹೆಚ್ಚೆಚ್ಚು ತಂತ್ರಜ್ಞಾನಗಳಿಗೆ ಹತ್ತಿರ ಮಾಡಬೇಕು. 
ಅಂತೆಯೇ ಶಿಕ್ಷಣದಿಂದಲೇ ಶ್ರೇಷ್ಠತೆ ಲಭಿಸುವುದೂ ಇಲ್ಲ. ಶ್ರೇಷ್ಠತೆ ಎಂಬುದು ನಮ್ಮ ದೃಢನಂಬಿಕೆ ಮೇಲೆ ಆಧಾರಿತವಾಗಿರುತ್ತದೆ. ಉಸ್ಸೇನ್ ಬೋಲ್ಟ್ ವಿರುದ್ಧ ಓಡಿ ಗೆದ್ದರೆ ಅದು ಶ್ರೇಷ್ಟತೆ ಎನಿಸುವುದಿಲ್ಲ. ನಮ್ಮ ವಿರುದ್ಧ ನಾವೇ  ಓಡಿ ಜಯಗಳಿಸಬೇಕು. ಅದು ಶ್ರೇಷ್ಠತೆ ಎನಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com