ಕ್ರಿಕೆಟ್ ಅಷ್ಟೇ ಅಲ್ಲ, ಫುಟ್ಬಾಲ್ ನಲ್ಲೂ ವಿರಾಟ್ ತಂಡವನ್ನು ಗೆಲ್ಲಿಸಿದ ಧೋನಿ!
ಬೆಸ್ಟ್ ಗೋಲ್ ಕೀಪರ್ ಆಗಿದ್ದ ಧೋನಿ ಈಗ ಬಾಲಿವುಡ್ ಆಲ್ ಸ್ಟಾರ್ಸ್ ಎಫ್ಸಿ ವಿರುದ್ಧ ನಡೆಯುತ್ತಿರುವ ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿದ್ದು ತಾಜಾ ಸುದ್ದಿ.
ಮಹೇಂದ್ರ ಸಿಂಗ್ ಧೋನಿ ಫುಟ್ಬಾಲ್ ತಂಡಕ್ಕೆ ಉತ್ತಮ ಗೋಲ್ಕೀಪರ್ ಆಗಿದ್ದು ಎಲ್ಲರಿಗೂ ತಿಳಿದೇ ಇದೆ. ಬೆಸ್ಟ್ ಗೋಲ್ ಕೀಪರ್ ಆಗಿದ್ದ ಧೋನಿ ಈಗ ಬಾಲಿವುಡ್ ಆಲ್ ಸ್ಟಾರ್ಸ್ ಎಫ್ಸಿ ವಿರುದ್ಧ ನಡೆಯುತ್ತಿರುವ ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿದ್ದು ತಾಜಾ ಸುದ್ದಿ.
ಕ್ರಿಕೆಟ್ ತಾರೆಯರ ಆಲ್ ಹಾರ್ಟ್ ಎಫ್ಸಿ ತಂಡದ ಪರ ಎಂಎಸ್ ಧೋನಿ ಎರಡು ಗೋಲು ದಾಖಲಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎಂತಹ ವೃತ್ತಿಪರ ಫುಟ್ಬಾಲ್ ಆಟಗಾರರಿಗೂ ಅಚ್ಚರಿಯಾಗುವ ರೀತಿಯಲ್ಲಿ ಗೋಲು ದಾಖಲಿಸಿದ್ದು ವಿಶೇಷವಾಗಿತ್ತು.