ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂದದ ನಾಯಕಿ ಮಿಥಾಲಿ ರಾಜ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಮಿಥಾಲಿ ರಾಜ್ ತಾವು ಸ್ನೇಹಿತರೊದನೆ ಇದ್ದ ಸಂತಸದ ಕ್ಷಣಗಳ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಸೆಪ್ಟೆಂಬರ್ 6ರಂದು ಮಾಡಿರುವ ಟ್ವಿಟರ್ ಪೋಸ್ಟ್‌ನಲ್ಲಿ ಮಿಥಾಲಿ ರಾಜ್ ತಮ್ಮ ಗೆಳತಿಯರ ಜತೆಗೆ ಕಳೆದ ಸಂತಸದ ಕ್ಷಣವನ್ನು ಸೆಲ್ಫಿ ಮುಖಾಂತರ ಹಂಚಿಕೊಂಡಿದ್ದರು.
ಅದರಲ್ಲಿ ಅವರು ತೊಟ್ಟ ಉಡುಗೆ ಅನುಚಿತ ಆಗಿದೆ ಎಂದು ಆರೋಪಿಸಿದ ಅವರ ಅಭಿಮಾನಿಗಳು, ಟ್ವಿಟ್ಟಿಗರು ಅವರನ್ನು 'ಪೋರ್ನ್ ಸ್ಟಾರ್' ಎಂದು ತೆಗಳಿದ್ದಾರೆ.
ಕೇಲವು ದಿನಗಳ ಹಿಂದೆಯಷ್ಟೇ ಕಂಕುಳದಲ್ಲಿ ಬೆವರು ಕಾಣಿಸಿಕೊಂಡಿರುವುದನ್ನು ಪ್ರಶ್ನಿಸಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಮಿಥಾಲಿ ರಾಜ್ ಟ್ವಿಟರ್ ನಲ್ಲಿ ಬೆವರಿಳಿಸಿದ್ದರು ಬೆನ್ನುವುದನ್ನು ನಾವಿಲ್ಲಿ ನೆನೆಯಬಹುದು.
ಈಗ ಅಭಿಮಾನಿಗಳು ಮಿಥಾಲಿ ವಿರುದ್ಧ ಮತ್ತೆ ಹರಿಹಾಯ್ದಿದ್ದು ಕ್ರಿಕೆಟ್ ತಾರೆ ಯಾವ ಬಗೆಯಲ್ಲಿ ಪ್ರತಿಕ್ರಯಿಸುತ್ತಾರೆ ನೋಡಬೇಕಿದೆ.