ಕಾಮನ್ ವೆಲ್ತ್ ಗೇಮ್ಸ್: ಮಹಿಳೆಯರ ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕ ಲಭಿಸಿದ್ದು, ಮಹಿಳೆಯ 10 ಮೀಟರ್ ಏರ್ ರೈಫಲ್ಸ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕ ಲಭಿಸಿದೆ.
ಪದಕ ಪಡೆದ ಮೆಹುಲಿ ಘೋಷ್ ಮತ್ತು ಅಪೂರ್ವಿ ಚಂಡೇಲಾ
ಪದಕ ಪಡೆದ ಮೆಹುಲಿ ಘೋಷ್ ಮತ್ತು ಅಪೂರ್ವಿ ಚಂಡೇಲಾ
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕ ಲಭಿಸಿದ್ದು, ಮಹಿಳೆಯ 10 ಮೀಟರ್ ಏರ್ ರೈಫಲ್ಸ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕ ಲಭಿಸಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೋ ಅವರಿಗೆ ತೀವ್ರ ಪೈಪೋಟಿ ನೀಡಿದ ಮೆಹುಲಿ ಘೋಷ್ ಮಾರ್ಟಿನಾ ಅವರಷ್ಟೇ ಅಂದರೆ 247.2 ಅಂಕಗಳಿಸಿದ್ದರಾದರೂ,  ಮಾರ್ಟಿನಾ 10.3 ಮೀಟರ್ ಅಂತರದಲ್ನಿ ಗುರಿ ಛೇದಿಸಿದರೆ, ಮೆಹುಲಿ 9.9 ಮೀಟರ್ ಅಂತರದ ಗುರಿಯನ್ನು ಛೇದಿಸಿದರು.
ಹೀಗಾಗಿ ಅಂತರದ ಆಧಾರದಲ್ಲಿ ಸಿಂಗಾಪುರಕ್ಕೆ ಚಿನ್ನದ ಪದಕ ಹೋಯಿತು. ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂಡೇಲಾ ಅವರಿಗೂ ಬೆಳ್ಳಿ ಪದಕ ಪಡೆಯುವ ಅಪೂರ್ವ ಅವಕಾಶ ದೊರೆತಿತ್ತು. ಮೊದಲೆರಡು ಶಾಟ್ ಗಳನ್ನು 9.9 ಮತ್ತು 9.4 ಅಂತರದಲ್ಲಿ ಪೂರ್ಣಗೊಳಿಸಿದ್ದ ಅಪೂರ್ವಿ ಒಟ್ಟು 225.3 ಅಂಕಗಳಿಸುವ ಕಂಚಿನ ಪದಕಕ್ಕೇ ತೃಪ್ತಿ ಪಟ್ಟುಕೊಂಡರು.
ಇದಕ್ಕೂ ಮೊದಲು ನಡೆದ ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಜೀತುರಾಯ್ ಸ್ವರ್ಣ ಪದಕ ಪಡೆದರೆ ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕ ಪಡೆದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com