ಓಂ ಮಿಥರ್ವಾಲ್
ಕ್ರೀಡೆ
ಕಾಮನ್ ವೆಲ್ತ್ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದ ಓಂ ಮಿಥರ್ವಾಲ್
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಬುಧವಾರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕ ಗಳಿಸಿದ್ದಾರೆ.
ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಬುಧವಾರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕ ಗಳಿಸಿದ್ದಾರೆ.
ಪುರುಷರ 50 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಮಿಥರ್ವಾಲ್ ಮೂರನೇ ಸ್ಥಾನ ಪಡೆಯು ಮೂಲಕ ಕಂಚಿನ ಪದಕ ಗಳಿಸಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ 148.3 ಅಂಕಗಳಿಸಿ ಓಂ ಮಿಥರ್ವಾಲ್ ಕಂಚಿನ ಪದಕ ಗಳಿಸಿದ್ದರು.
ಇನ್ನು ಹಾಲಿ ಕ್ರೀಡಾಕೂಟದಲ್ಲಿ ಮಿಥರ್ವಾಲ್ ಗೆ 2ನೇ ಪದಕವಾಗಿದ್ದು. ಇದಕ್ಕೂ ಮೊದಲು ನಡೆದ ಪುರುಷರ 10 ಮೀ. ಏರ್ ಪಿಸ್ತೂಲ್ ನಲ್ಲಿ ಇದೇ ಮಿಥರ್ವಾಲ್ ಕಂಚಿನ ಪದಕ ಗಳಿಸಿದ್ದರು.
Thank you! My husband and I would love to join you
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ