ಕಾಮನ್'ವೆಲ್ತ್ ಕ್ರೀಡಾಕೂಟ 2018: ಸಂಜೀವ್ ರಜಪೂತ್, ಗೌರವ್ ಸೋಳಂಕಿ, ಸುಮಿತ್ ಮಲಿಕ್ ಗೆ ಚಿನ್ನ

21ನೇ ಕಾಮನ್ ವೆಲ್ತ್ ಕ್ರೀಡಾಕೂಡದಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ಕ್ರೀಡಾಕೂಟ ಮುಕ್ತಾಯಗೊಳ್ಳಲು ಇನ್ನು ಕೇವಲ 2 ದಿನಗಳು ಮಾತ್ರ ಬಾಕಿಯಿದ್ದು, ಕಳೆದ ಆವೃತ್ತಿಯಲ್ಲಿ ಗಳಿಸಿದ್ದ ಒಟ್ಟು ಪದಕಗಳ ಸಂಖ್ಯೆಯನ್ನು ಮೀರುವ ಸಾಧ್ಯತೆಗಳು ಕಾಣುತ್ತಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗೋಲ್ಡ್'ಕೋಸ್ಟ್: 21ನೇ ಕಾಮನ್ ವೆಲ್ತ್ ಕ್ರೀಡಾಕೂಡದಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ಕ್ರೀಡಾಕೂಟ ಮುಕ್ತಾಯಗೊಳ್ಳಲು ಇನ್ನು ಕೇವಲ 2 ದಿನಗಳು ಮಾತ್ರ ಬಾಕಿಯಿದ್ದು, ಕಳೆದ ಆವೃತ್ತಿಯಲ್ಲಿ ಗಳಿಸಿದ್ದ ಒಟ್ಟು ಪದಕಗಳ ಸಂಖ್ಯೆಯನ್ನು ಮೀರುವ ಸಾಧ್ಯತೆಗಳು ಕಾಣುತ್ತಿವೆ. ಎಂದಿನಿಂದೆ ಶನಿವಾರ ಕೂಡ ಭಾರತದ ಶುಭಕರವಾಗಿದ್ದು, ಆರಂಭಿಕ ದಿನದಲ್ಲಿಯೇ ಭಾರತದ ತೆಕ್ಕೆಗೆ 3 ಚಿನ್ನಗಳು ಬಿದ್ದಿವೆ. 
50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಸಂಜೀವ್ ರಜಪೂತ್ ಅವರು ಚಿನ್ನವನ್ನು ಗೆದ್ದಿದ್ದು, ಪುರುಷರ ಬಾಕ್ಸಿಂಗ್'ನಲ್ಲಿ 52 ಕೆಜಿ ವಿಭಾಗದಲ್ಲಿ ಗೌರವ್ ಸೋಲಂಕಿಯವರು ಚಿನ್ನವನ್ನು ಗೆದ್ದಿದ್ದಾರೆ. 
ಇದರಂತೆ 125 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕೆ ಇಳಿದ ಸುಮಿತ್ ಮಲಿಕ್ ಅವರೂ ಕೂಡ ಚಿನ್ನವನ್ನು ಗೆದ್ದಿದ್ದಾರೆ. 
ಭಾರತೀಯ ಬಾಕ್ಸರ್ ಮನೀಶ್ ಕೌಶಿಕ್ ಅವರು ಪುರುಷರ 60 ಕೆಜಿ ವಿಭಾಗದ ಫೈನಲ್ ನಲ್ಲಿ ಬೆಳ್ಳಿಯನ್ನು ಗೆದ್ದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com