ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಥಾಯ್ ಲ್ಯಾಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾಡ್ ಹದಿನೆಂಟನೇ ಆವೃತ್ತಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ.
ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಥಾಯ್ ಲ್ಯಾಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಥಾಯ್ ಲ್ಯಾಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾಡ್ ಹದಿನೆಂಟನೇ ಆವೃತ್ತಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ.
ಥಾಯ್ ಲ್ಯಾಂಡ್ ವಿರುದ್ಧದ ಪಂದ್ಯವನ್ನು  5-0 ಗೋಲುಗಳಿಂದ ಜಯಿಸಿದ ಭಾರತ ವನಿತೆಯರು ಅಂತಿಮ ನಾಲ್ಕರ ಘಟ್ಟ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ತಂಡದ ನಾಯಕಿ ರಾಣಿ ರಾಂಪಾಲ್ ಹ್ಯಾಟ್ರಿಕ್ ಗೋಲು ದಾಖಲಿಸಿ ಸಾಧನೆ ಮೆರೆದಿದ್ದಾರೆ. ಅವರು ಪಂದ್ಯದ 37, 46 ನತ್ತು 56 ನೇ ನಿಮಿಷಗಳಲ್ಲಿ ಗೊಲು ದಾಖಲಿಸಿದರು.
ವಿಶ್ವದ 28 ನೇ ಶ್ರೇಯಾಂಕಿತ ಥಾಯ್ ಲ್ಯಾಂಡ್ ಗೆ ಯಾವುದೇ ಗೋಲು ಗಳಿಸಲು ಭಾರತೀಯ ಪಡೆ ಅವಕಾಶವನ್ನೇ ನಿಡಲಿಲ್ಲ ಎನ್ನುವುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com