ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಚೀನಾವನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ!

18ನೇ ಆವೃತ್ತಿ ಏಷ್ಯನ್ ಗೇಮ್ಸ್ ಕ್ರೀಡಾಕುಟ ಇಂಡೋನೇಷಿಯಾದಲ್ಲಿ ನಡೆಯುತ್ತಿದೆ. ಕ್ರೀಡಾಕೂಟದ 11ನೇ ದಿನವಾದ ಬುಧವಾರ ಭಾರತ ಮಹಿಳಾ ಹಾಕಿ ಪಡೆ ಚೀನಾವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಚೀನಾವನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ!
ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಚೀನಾವನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ!
ಜಕಾರ್ತಾ: 18ನೇ ಆವೃತ್ತಿ ಏಷ್ಯನ್ ಗೇಮ್ಸ್ ಕ್ರೀಡಾಕುಟ ಇಂಡೋನೇಷಿಯಾದಲ್ಲಿ ನಡೆಯುತ್ತಿದೆ. ಕ್ರೀಡಾಕೂಟದ 11ನೇ ದಿನವಾದ ಬುಧವಾರ ಭಾರತ ಮಹಿಳಾ ಹಾಕಿ ಪಡೆ ಚೀನಾವನ್ನು   1-0 ಗೋಲುಗಳಿಂದ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಭಾರತೀಯ ಮಹಿಳಾ ಹಾಕಿ ತಂಡವು 20 ವರ್ಷಗಳ ನಂತರ ಈ ಐತಿಹಾಸಿಕ ಸಾಧನೆ ಮಾಡಿದೆ. 
ಇದಕ್ಕೂ ಹಿಂದೆ 1998ರಲ್ಲಿ ಭಾರತ ಮಹಿಳಾ ಹಾಕಿ ಪಡೆ ಏಷ್ಯನ್ ಗೇಮ್ಸ್ ಫೈನಲ್ಸ್ ಪ್ರವೇಶಿಸಿತ್ತು. ಅಂದು ನಡೆದಿದ್ದ ಫೈನಲ್ಸ್ ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-1 ಗೋಲುಗಳ ಅಂತರದಿಂದ ಪರಾಜಿತರಾಗಿದ್ದ ಭಾರತ ವನಿತೆಯರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.
ಇಂದು ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಗುರ್ಜೀತ್ ಕೌರ್ 52ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲುಯ್ ದಾಖಲಿಸಿದ್ದರು. ಇದು  ಪೆನಾಲ್ಟಿ ಕಾರ್ನರ್ಬಳಿಕ ಪಡೆದ ಗೋ;ಲು ಎನ್ನುವುದು ಗಮನಾರ್ಹ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com