ಹಾಕಿ ವಿಶ್ವಕಪ್‌ 2018: ಬೆಲ್ಜಿಯಂ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಡ್ರಾ ಮಾಡಿಕೊಂಡ ಭಾರತ

ಹಾಕಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಪುರುಷರ ತಂಡ ತನ್ನ ಅಜೇಯ ಓಟ ಮುಂದುವರೆಸಿದ್ದು, ಬಲಿಷ್ಠ ಬೆಲ್ಜಿಯಂ ವಿರುದ್ಧ ಡ್ರಾ ಮಾಡಿಕೊಂಡಿದೆ.
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
ನವದೆಹಲಿ: ಹಾಕಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಪುರುಷರ ತಂಡ ತನ್ನ ಅಜೇಯ ಓಟ ಮುಂದುವರೆಸಿದ್ದು, ಬಲಿಷ್ಠ ಬೆಲ್ಜಿಯಂ ವಿರುದ್ಧ ಡ್ರಾ ಮಾಡಿಕೊಂಡಿದೆ.
ಒಡಿಶಾದ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಬೆಲ್ಜಿಯಂ ವಿರುದ್ಧ 2-2 ಗೋಲುಗಳ ಮೂಲಕ ಡ್ರಾ ಸಾಧಿಸಿದೆ. ಆ ಮೂಲಕ ಭಾರತ ತಂಡ ಕ್ವಾರ್ಟರ್​ ಫೈನಲ್ ಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಕೊನೆಯ ನಿಮಿಷದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯ 2-2 ಗೋಲುಗಳ ಅಂತರದಲ್ಲಿ ಡ್ರಾ ಮಾಡಿಕೊಂಡಿತು. ಈ ಮೂಲಕ ಸತತ ಎಂಟನೇ ಮುಖಾಮುಖಿಯಲ್ಲಿಯೂ ಭಾರತ ಬೆಲ್ಜಿಯಂ ತಂಡವನ್ನು ಮಣಿಸಲು ವಿಫಲವಾಯಿತು.
ಪಂದ್ಯದ ಆರಂಭದಲ್ಲಿ ಹಿನ್ನಡೆ ಕಂಡಿದ್ದ ಭಾರತ ಹರ್ಮನ್​ಪ್ರೀತ್​ ಸಿಂಗ್​ ಮತ್ತು ಸಿಮ್ರನ್​ ಜಿತ್​ ಸಿಂಗ್​ ಗಳಿಸಿದ ಗೋಲುಗಳ ನೆರವಿನಿಂದ 2-1 ರ ಅಂತರದ ಮುನ್ನಡೆ ಪಡೆಯಿತು. ಆದರೆ 56ನೇ ನಿಮಿಷದಲ್ಲಿ ಗೋಲು ಸಿಡಿಸಿದ ಬೆಲ್ಜಿಯಂನ ಸಿಮೋನ್​ ಗೌಗ್ನಾರ್ಡ್​ ಪಂದ್ಯ ಡ್ರಾ ಆಗುವಂತೆ ಮಾಡಿದರು. ಅಂತಿಮವಾಗಿ ಸಮಯ ಮುಕ್ತಾಯದ ವೇಳೆಗೆ ಬೆಲ್ಜಿಯಂ 2 ಗೋಲುಗಳ ಮೂಲಕ ಭಾರತದ ಎದುರು ಸೋಲು ತಪ್ಪಿಸಿಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com