ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಪ್ರಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಸರಣಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಹಂಗೇರಿಯ ಟಿಮಿಯಾ ಬಾಬೋಸ್ ಅವರ ಜತೆಗೂಡಿದ ಬೋಪಣ್ಣ ಜೋಡಿ ಎಲ್ಲೆನ್ ಪ್ರೀಜ್ ಮತ್ತು ಆಂಡ್ರ್ಯೂ ವಿಟ್ಟಿಂಗ್ಟನ್ ಅವರನ್ನು 6-2, 6-4 ನೇರ ಸೆಟ್ ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಬೋಪಣ್ಣ ಜೋಡಿ ತಮ್ಮ ಮುಂದಿನ ಸುತ್ತಿನಲ್ಲಿ ವಾನಿಯಾ ಕಿಂಗ್ ಮತ್ತು ಫ್ರಾಂಕೋ ಸ್ಕುಗರ್ ಅವರನ್ನು ಎದುರಿಸಲಿದ್ದಾರೆ.