ಆಸ್ಟ್ರೇಲಿಯನ್ ಓಪನ್: ಕ್ವಾರ್ಟರ್ ಫೈನಲ್ಸ್ ತಲುಪಿದ ರೋಹನ್ ಬೋಪಣ್ಣ

ಭಾರತ್ದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಶ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ನ ಕ್ವಾರ್ಟರ್ ಫೈನಲ್ಸ್ ಸುತ್ತು ಪ್ರವೇಶಿಸಿದ್ದಾರೆ.
ರೋಹನ್ ಬೋಪಣ್ಣ-ಟಿಮಿಯಾ ಬಬೂಸ್
ರೋಹನ್ ಬೋಪಣ್ಣ-ಟಿಮಿಯಾ ಬಬೂಸ್
Updated on: 
ಮೆಲ್ಬೋರ್ನ್: ಭಾರತ್ದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಶ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ನ ಕ್ವಾರ್ಟರ್ ಫೈನಲ್ಸ್ ಸುತ್ತು ಪ್ರವೇಶಿಸಿದ್ದಾರೆ. 
ಮಂಗಳವಾರ ನಡೆದ ಪಂದ್ಯದಲ್ಲಿ ಹಂಗೇರಿಯ ಟಿಮಿಯಾ ಬಬೂಸ್ ಜತೆಯಾಗಿ ಅಮೆರಿಕಾದ ವ್ಯಾನಿಯಾ ಕಿಂಗ್ ಮತ್ತು ಕ್ರೋವೆಶಿಯಾದ ಫ್ರಾಂಕೊ ಸುಗೊರ್  ಅವರನ್ನು 6-4, 6-4 ನೇರ ಸೆಟ್ ಗಳಿಂದ ಮಣಿಸಿ ಈ ಸಾಧನೆ ಮಾಡಿದ್ದಾರೆ.
ಇನ್ನು ಅಂತಿಮ ಎಂಟರ ಸುತ್ತಿನಲ್ಲಿ ಬೋಪಣ್ಣ ಜೋಡಿ ಕೊಲಂಬಿಯಾದ ಸೆಬಾಸ್ಟಿಯನ್ ಕ್ಯಾಬಲ್ ಮತ್ತು ಅಮೆರಿಕದ ಅಬಿಗೈಲ್ ಅವರನ್ನು ಎದುರಿಸಬೇಕಿದೆ.
ಈ ನಡುವೆ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಭಾರತದ ಲಿಯಾಂಡರ್ ಪೇಸ್, , ದಿವಿಜ್ ಶರಣ್, ಪೂರವ್ ರಾಜಾ ಹಾಗೂ ಬೋಪಣ್ಣ ಪರಾಭವ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com