ಆಸ್ಟ್ರೇಲಿಯನ್ ಓಪನ್: ಮಿಶ್ರ ಡಬಲ್ಸ್‌ ಫೈನಲ್‌ ಪ್ರವೇಶಿಸಿದ ಬೋಪಣ್ಣ - ಬಬೂಸ್ ಜೋಡಿ

ಭಾರತದ ರೋಹನ್ ಬೋಪಣ್ಣ ಅವರು ತಮ್ಮ ಜತೆಗಾರ್ತಿ ಹಂಗೇರಿಯಾದ ಟಿಮಿಯಾ ಬಬೂಸ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್....
ಬೋಪಣ್ಣ - ಬಬೂಸ್ ಜೋಡಿ
ಬೋಪಣ್ಣ - ಬಬೂಸ್ ಜೋಡಿ
ಮೆಲ್ಬೋರ್ನ್: ಭಾರತದ ರೋಹನ್ ಬೋಪಣ್ಣ ತಮ್ಮ ಜತೆಗಾರ್ತಿ ಹಂಗೇರಿಯಾದ ಟಿಮಿಯಾ ಬಬೂಸ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್ಲ ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.
ಇಂದು ನಡೆದ ಮಿಶ್ರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಬೋಪಣ್ಣ - ಬಬೂಸ್ ಜೋಡಿ, ಸ್ಪೇನ್-ಬ್ರೆಜಿಲ್‌ನ ಮಾರ್ಸೆಲೊ ಡೆಮೊಲಿನರ್ ಹಾಗೂ ಮಾರ್ಟಿನೆಜ್ ಸ್ಯಾನ್‌ಚೆಜ್ ವಿರುದ್ಧ 7-5, 5-7, 10-6ರ ಕಠಿಣ ಅಂತರದಲ್ಲಿ ಗೆಲುವು ಸಾಧಿಸಿದೆ.
2017ರಲ್ಲಿ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ಛಾಪು ಮೂಡಿಸಿರುವ ಬೋಪಣ್ಣ, ಪ್ರಸಕ್ತ ಸಾಲಿನಲ್ಲೂ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com