ಕ್ರೀಡೆ

ದಂಗಲ್ ಖ್ಯಾತಿಯ ಪೋಗಟ್ ಕುಟುಂಬವನ್ನು ಚಹಾಕೂಟಕ್ಕೆ ಆಹ್ವಾನಿಸಿದ ದಕ್ಷಿಣ ಕೊರಿಯಾ ಪ್ರಥಮ ಮಹಿಳೆ

ದಂಗಲ್ ಖ್ಯಾತಿಯ ಪೋಗಟ್ ಕುಟುಂಬವನ್ನು ಚಹಾಕೂಟಕ್ಕೆ ಆಹ್ವಾನಿಸಿದ ದಕ್ಷಿಣ ಕೊರಿಯಾ ಪ್ರಥಮ ಮಹಿಳೆ
ದಂಗಲ್ ಖ್ಯಾತಿಯ ಪೋಗಟ್ ಕುಟುಂಬವನ್ನು ಚಹಾಕೂಟಕ್ಕೆ ಆಹ್ವಾನಿಸಿದ ದ. ಕೊರಿಯಾ ಪ್ರಥಮ ಮಹಿಳೆ
Published On :
ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ಪ್ರಸಿದ್ದ ಚಿತ್ರ ’ದಂಗಲ್’ ನಲ್ಲಿ ಮಿಂಚಿದ್ದ ಪೋಗಟ್ ಕುತುಂಬ ಸದಸ್ಯರನ್ನು ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಜಿಮ್ ಜಂಗ್ ಸೂಕ್ ತಾವು ಚಹಾ ಕೂಟಕ್ಕೆ ಆಹ್ವಾನಿಸಿದ್ದಾರೆ.
ನಾಲ್ಕು ದಿನಗಳ ಭೇತಿಗಾಗಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ದಂಪತಿ ’ದಂಗಲ್’ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಜತೆ ಸಿನಿಮಾ ವೀಕ್ಷಿಸಿದ ದ. ಕೊರಿಯಾ ಅಧ್ಯಕ್ಷರ ಪತ್ನಿ ಪೋಗಟ್ ಕುಟುಂಬಕ್ಕೆ ಚಹಾಕೂಟದ ಆಹ್ವಾನ ನಿಡಿದ್ದಾರೆ ಎಂದು ಖ್ಯಾತ ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಒಂದು ಬಟ್ಟಲು ಚಹಾವನ್ನು ಆಕೆಯೊಂದಿಗೆ ಆಹ್ವಾನಿಸಿರುವುದನ್ನು ನಾವು ಗೌರವಿಸುತ್ತೇವೆ, ದಂಗಲ್ ಚಿತ್ರವನ್ನು ದ.. ಕೊರಿಯಾದ  ಮೊದಲ ಮಹಿಳೆ ಬಹಳ ಮೆಚ್ಚಿಕೊಂಡಿದ್ದಾರೆ ಎಂದು ತಿಳಿದು ನಮಗೆ ಸಂತಸವಾಗಿದೆ"  ಅವರು ದೂರವಾಣಿಯ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
2016 ರಲ್ಲಿ ಬಿಡುಗಡೆಯಾದ 'ದಂಗಲ್', ಮಹಾವೀರ್ ಸಿಂಗ್ ಪೋಗಟ್ ಹಾಗು ಅವರ ಪುತ್ರಿಯರಾದ ಗೀತಾ ಮತ್ತು ಬಬಿತಾರ ಜೀವನವನ್ನು ಆಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.