ಭಾರತ
ಕ್ರೀಡೆ
ಭಾರತ ಚಾಂಪಿಯನ್ನರ ಚಾಂಪಿಯನ್; ಕಬಡ್ಡಿ ಮಾಸ್ಟರ್ಸ್ ಗೆದ್ದ ಅಜಯ್ ಠಾಕೂರ್ ಪಡೆ!
ದುಬೈನಲ್ಲಿ ನಡೆದ 2018ರ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ...
ದುಬೈ: ದುಬೈನಲ್ಲಿ ನಡೆದ 2018ರ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಭಾರತ ಇರಾನ್ ವಿರುದ್ಧ 44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾವನ್ನು 36-20 ಅಂಕಗಳಿಂದ ಮಣಿಸಿದ್ದ ಭಾರತ ಫೈನಲ್ ಪ್ರವೇಶಿಸಿತ್ತು.
ಅಜಯ್ ಠಾಕೂರ್ 9 ರೇಡ್ ಪಾಯಿಂಟ್ ಗಳಿಸಿದರು. ಭಾರತ ಓಟದಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಪಂದ್ಯ ಆರಂಭಿಸಿತ್ತು. ಪಂದ್ಯದ ಮೇಲೆ ಹಿಡಿತ ಸಾಧಿಸಲು ಇರಾನ್ ಪ್ರಯತ್ನಿಸಿತು.
ಆದರೆ. ರಿಶಾಂಕ್, ಠಾಕೂರ್, ಮತ್ತು ಗೊಯಟ್ ಇರಾನ್ ಮುನ್ನಡೆ ಸಾಧಿಸಲು ಬಿಡಲಿಲ್ಲ. ಈಗ ಭಾರತ ವಿಶ್ವ ಚಾಂಫಿಯನ್ ಆಗಿ ಹೊರಹೊಮ್ಮಿದ್ದು, ಕಬ್ಬಡಿ ಮಾಸ್ಟರ್ಸ್ ಆಗಿಯೂ ಖ್ಯಾತಿ ಪಡೆದಿದ್ದಾರೆ.


