ಸುಲ್ತಾನ್ ಆಜ್ಲಾನ್ ಷಾ ಟೂರ್ನಿ: ಐರ್ಲೆಂಡ್ ವಿರುದ್ಧ ಭಾರತ ಪರಾಭವ, ಫೈನಲ್ ಕನಸು ನುಚ್ಚು ನೂರು

ಮಲೇಷಿಯಾದಲ್ಲಿ ನಡೆಯುತ್ತಿರುವ ಅಜ್ಲಾನ್‌ ಶಾ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ಐರ್ಲೆಂಡ್ ವಿರುದ್ಧ 2-3 ಗೋಲುಗಳ ಅಂತರದಿಂದ ಸೋಲನುಭವಿಸಿದೆ.
ಸುಲ್ತಾನ್ ಆಜ್ಲಾನ್ ಷಾ ಟೂರ್ನಿ: ಐರ್ಲೆಂಡ್ ವಿರುದ್ಧ ಭಾರತ ಪರಾಭವ, ಫೈನಲ್ ಕನಸು ನುಚ್ಚು ನೂರು
ಸುಲ್ತಾನ್ ಆಜ್ಲಾನ್ ಷಾ ಟೂರ್ನಿ: ಐರ್ಲೆಂಡ್ ವಿರುದ್ಧ ಭಾರತ ಪರಾಭವ, ಫೈನಲ್ ಕನಸು ನುಚ್ಚು ನೂರು
Updated on: 
ಇಪೋಹ್‌(ಮಲೇಷಿಯಾ): ಮಲೇಷಿಯಾದಲ್ಲಿ ನಡೆಯುತ್ತಿರುವ ಅಜ್ಲಾನ್‌ ಶಾ ಹಾಕಿ ಟೂರ್ನಮೆಂಟ್‌ನಲ್ಲಿ  ಭಾರತ ಐರ್ಲೆಂಡ್ ವಿರುದ್ಧ 2-3 ಗೋಲುಗಳ ಅಂತರದಿಂದ ಸೋಲನುಭವಿಸಿದೆ.
ಕಡೆಯ ಲೀಗ್ ನಲ್ಲಿ ಬಾರತ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು ಈ ಸೋಲಿನೊಡನೆ ಹಾಕಿ ತಂಡ ಸರಣಿಯ ಫೈನಲ್ ಪ್ರವೇಶಿಸುವ ಕನಸು ನುಚ್ಚು ನೂರಾಗಿದೆ.
ಐರ್ಲೆಂಡ್ ಪದವಾಗಿ ನಿಲಾಮ್ ಕ್ಸೆಸ್ ( 22ನೇ ನಿಮಿಷ),,  ಸೀನ್ ಮುರ್ರೆ (36ನೇ ನಿಮಿಷ),  ಶೇನ್ ಓ'ಡೋನೋಘು (42ನೇ ನಿಮಿಷ) ಗಳಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. 
ಇನ್ನು ಭಾರತದ ಪರವಾಗಿ ರಮನ್‌ದೀಪ್ ಸಿಂಗ್ (10ನೇ ನಿಮಿಷ), ಅಮಿತ್ ರೋಹಿದಾಸ್. (26ನೇ ನಿಮಿಷ), ಗೋಲು ಗಳಿಸಿಕೊಟ್ಟು ತಂಡಕ್ಕೆ ಸೋಲಿನ ಅಂತರವನ್ನು ಕಡಿಮೆಗೊಳಿಸಿದ್ದಾರೆ.
ನಿರ್ಣಾಯಕ ಪಂದ್ಯದಲ್ಲಿ ಬಾರತ ಸೋತ ಕಾರಣ ಅಂತಿಮ ಸುತ್ತು ಪ್ರವೇಶದ ಕನಸು ಭಗ್ನವಾಗಿದ್ದು ಐದು ಹಾಗೂ ಆರನೇ ಸ್ಥಾನಕ್ಕಾಗಿ ತಂಡವು ಸೆಣೆಸಬೇಕಿದ್ದು ಶನಿವಾರದಂದು ಭಾರತ ತನ್ನ ಮುಂದಿನ ಪಂದ್ಯವನ್ನಾಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com