ಯುಸಿಎಲ್ ನಲ್ಲಿ ದಾಖಲೆ ಪುನರ್ ನಿರ್ಮಾಣ: ರೊನಾಲ್ಡೋ ದಾಖಲೆ ಮುರಿದ ಮೆಸ್ಸಿ

ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದ್ದ ದಾಖಲೆಯನ್ನು ಬಾರ್ಸಿಲೋನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಮುರಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರೋಮ್: ಚಾಂಪಿಯನ್ಸ್ ಲೀಗ್ ನಲ್ಲಿ ಫುಟ್ಬಾಲ್ ದಂತಕಥೆಗಳು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಇದೀಗ ನೂತನ ಸೇರ್ಪಡೆ ಎಂಬಂತೆ ಈ ಹಿಂದೆ ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದ್ದ ದಾಖಲೆಯನ್ನು ಬಾರ್ಸಿಲೋನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಮುರಿದಿದ್ದಾರೆ.
ಹೌದು.. ಅದ್ಬುತ ಗೋಲಿನ ಮೂಲಕ ತಮ್ಮ ಗೋಲುಗಳ ಸಂಖ್ಯೆಯನ್ನು 106ಕ್ಕೆ ಏರಿಸಿಕೊಂಡರು. ಆ ಮೂಲಕ ಚಾಂಪಿಯನ್ಸ್ ಲೀಗ್ ನಲ್ಲಿ ಅತೀ ಹೆಚ್ಚು ವೈಯುಕ್ತಿಕ ಗೋಲು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಅಂತೆಯೇ ತಮ್ಮ ವೃತ್ತಿ ಜೀವನ ಎದುರಾಳಿ ಕ್ರಿಸ್ಟಿಯಾನೋ ರೊನಾಲ್ಡೋ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.
ರೊನಾಲ್ಡೋ ಒಟ್ಟು 10 ಗೋಲುಗಳನ್ನು ಗಳಿಸಿದ್ದು, ಮೆಸ್ಸಿ 106ನೇ ಗೋಲು ಗಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. ಡಚ್ ವಿರುದ್ಧದ ಈ ಪಂದ್ಯದಲ್ಲಿ ಬಾರ್ಕಾ 2-1 ಅಂತರದಲ್ಲಿ ಜಯಗಳಿಸಿತ್ತು. ಅಲ್ಲದೆ ಅದ್ಬುತ ಗೋಲಿನ ಮೂಲಕ ಜಯ ತಂದಿತ್ತ ಮೆಸ್ಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com