"ಆರಂಭದಲ್ಲಿ ನಮಗೆ ಯಾವ ಕಿಟ್ ಗಳೂ ದೊರಕುವುದಿಲ್ಲ ಎನ್ನಲಾಗಿತ್ತು. ಆದರೆ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯಿಂದ ಕಡೆಗೆ ನಾವು ಜೆರ್ಸಿಗಳನ್ನು ಪಡೆದುಕೊಂಡೆವು. ಆದರೆ ನಾವು ಇನ್ನೂ ನಮ್ಮ ಅಧಿಕೃತ ಬ್ಲೇಜರ್ ಗಳನ್ನು ಹೊಂದಿಲ್ಲ ಅಧಿಕೃತ ಸ್ವಾಗತ ಕಾರ್ಯ್ಕ್ರ್ಮ ಬುಧವಾರ ನಡೆಯಲಿದ್ದು ಇಷ್ಟರಲ್ಲಿ ನಾವೇ ನಮ ಹಳೆ ಬ್ಲೇಜರ್ ಗಳ ಮೇಲೆ ಲೋಗೋಗಳನ್ನು ಹೊಲಿದುಕೊಳ್ಳಲು ತೀರ್ಮಾನಿಸಿದ್ದೇವೆ, ಕಲ್ಕತ್ತಾ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಕ್ಲಬ್ ನಲ್ಲಿ ನಡೆದ ಸಭೆಯ ವೇಳೆ ಅವರು ಹೇಳಿದ್ದಾರೆ.